
ಸ.ಹಿ.ಪ್ರಾ ಶಾಲೆ ಕದಿಕಡ್ಕ ಇಲ್ಲಿನ ಇಕೋ ಕ್ಲಬ್ ವತಿಯಿಂದ ಅರಣ್ಯ ಇಲಾಖೆ ಜಾಲ್ಸೂರು ಶಾಖೆಯ ಸಹಯೋಗದೊಂದಿಗೆ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಜೂ. 5 ರಂದು ಆಚರಿಸಲಾಯಿತು.

ಜಾಲ್ಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಧ್ಯಕ್ಷತೆ ವಹಿಸಿದ್ದರು. ಜಾಲ್ಸೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರಂಜಿತಾ, ಗಸ್ತು ಅರಣ್ಯ ಪಾಲಕರಾದ ಕ್ಯಾತಲಿಂಗ, ಸನತ್ ಕುಮಾರ್, ದೀಕ್ಷಿತ್, ಗ್ರಾಮ ಪಂಚಾಯತಿ ಸದಸ್ಯ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ
ಬಾಬು.ಕೆ.ಎಂ., ಎಸ್ಡಿಎಂಸಿ ಅಧ್ಯಕ್ಷೆ ಸುಜಾತಾ,
ಉಪಾಧ್ಯಕ್ಷ ತಿಮ್ಮಯ್ಯ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















ಇದೇ ಸಂದರ್ಭ ಅರಣ್ಯ ಇಲಾಖೆಯಿಂದ ಶಾಲೆಗೆ ಗಿಡಗಳನ್ನು ನೀಡಲಾಯಿತು. ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಅರಣ್ಯ ಇಲಾಖೆ ವತಿಯಿಂದ ಸಿಹಿ ಹಂಚಲಾಯಿತು.










