ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

0

ವಿಶ್ವಪರಿಸರ ದಿನದ ಅಂಗವಾಗಿ
ಸುಳ್ಯದ ಗ್ರೀನ್ ವ್ಯೂ ಶಾಲೆಯಲ್ಲಿ ಸಸಿ ನೆಡುವ ಮತ್ತು ಗಿಡ ಮೂಲಿಕೆ ಗಳ ಪ್ರಾತ್ಯಕ್ಷಿಕೆ, ಉಪಯೋಗ ಗಳ ಮಾಹಿತಿ ಕಾರ್ಯಕ್ರಮ ಜೂ. 5 ರಂದು
ಜರಗಿತು.


ಹಿರಿಯ ನಾಟಿ ವೈದ್ಯ ಕೋಡಿ ಮಾಧವ ಗೌಡ ಉಬರಡ್ಕ ಇವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್,ಪ್ರ. ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಸ್ಥಳೀಯ ಜನ ಪ್ರತಿನಿಧಿ ಉಮ್ಮರ್ ಕೆ.ಎಸ್ ಹಾಗೂ ಸೂಡಾ ಅಧ್ಯಕ್ಷ ಕೆ ಎಂ ಮುಸ್ತಫಾ, ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕ ರಂಜಿತ್ ಸ್ವಾಗತಿಸಿ ಹಿರಿಯ ಶಿಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಅಶ್ವಿನಿ ವಂದಿಸಿದರು.