ಮಾಜಿ ಎಂ.ಎಲ್.ಎ ಪುತ್ರ ಜಾಗನೂ ಕೊಟ್ರು, ಅನುದಾನ ತರಿಸಿದ್ರು
ನಾಳೆ (ಜೂ.7) ಕ್ಕೆ ಉದ್ಘಾಟನೆ
ಐನೆಕಿದುವಿನಲ್ಲಿ ನೂತನವಾಗಿ ನಿರ್ಮಿತವಾದ ಅಂಗನವಾಡಿ ನಾಳೆ ಜೂನ್ .7 ರಂದು ಉದ್ಘಾಟನೆ ಗೊಳ್ಳಲಿದೆ. ಶಾಸಕಿ ಭಾಗೀರಥಿ ಮುರುಳ್ಯ ಕಟ್ಟಡವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಲ್ಲಾಜೆ ಅಧ್ಯಕ್ಷೆ ವಹಿಸಲಿದ್ದು ಎಂ.ಆರ್.ಪಿ.ಎಲ್ ನ ಕೃಷ್ಣ ಹೆಗ್ಡೆ ದೀಪ ಬೆಳಗಿಸಲಿದ್ದಾರೆ.
ಐನೆಕಿದು ವಿನ ಶಾಲಾ ಮೈದಾನದ ಮಾವಿನ ಮರದಡಿಯಲ್ಲಿ ಆರಂಭವಾಗಿದ್ದ ಅಂಗನವಾಡಿಗೀಗ 42 ವರ್ಷ. ಅದಕ್ಕೀಗ ಎಂ.ಆರ್.ಪಿ.ಎಲ್ ವತಿಯಿಂದ ನೂತನವಾಗಿ ಸುಸಜ್ಜಿತ ಕಟ್ಟಡ ರಚಿತವಾಗಿದೆ. ಈ ಕಟ್ಟಡ ರಚನೆಗೆ ಮಾಜಿ ಎಂ.ಎಲ್.ಎ ಕೂಜುಗೋಡು ಸುಬ್ರಹ್ಮಣ್ಯ ಗೌಡ ರ ಮಗ ಶಿವಕುಮಾರ್ ಕೂಜುಗೋಡು ಜಾಗನೂ ಕೊಟ್ಟು ಅನುದಾನ ತರಿಸಿ ಕಟ್ಟಡದ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಜನರ ಮೆಚ್ಚುಗೆಯ ಕೆಲಸ ಮಾಡಿದ್ದಾರೆ.
1984 ಐನೆಕಿದು ಹಿ.ಪ್ರಾ ಶಾಲಾ ಮೈದಾನ ಮಾವಿನ ಮರದಡಿಯಲ್ಲಿ ಬೆಂಚು ಇಟ್ಟು ಅಂಗನವಾಡಿ ಆರಂಭವಾಯಿತು. ಕೆಲ ತಿಂಗಳ ಬಳಿಕ ಅದನ್ನು ಐನೆಕಿದು ಶಾಲೆಯಲ್ಲಿ ತೆರೆಯಲಾಯಿತು. ಆಗ ಶಿಕ್ಷಕರಾಗಿದ್ದ ದಿl ಗಿರಿಯಪ್ಪ ಗೌಡ ಕೂಜುಗೋಡು ಕಟ್ಟೆಮನೆ ಅವರು ಶಾಲೆಯಲ್ಲಿ ಅಂಗನವಾಡಿ ನಡೆಸಲು ವ್ಯವಸ್ಥೆ ಮಾಡಿ ಕೊಟ್ಟವರು. ಅಲ್ಲಿಯೂ ಕೆಲ ತಿಂಗಳು ಶಾಲೆ ನಡೆದು ಅಲ್ಲೇ ಹತ್ತಿರ ಇದ್ದ ಯವಕ ಮಂಡಲದ ಕಟ್ಟಡದಲ್ಲಿ ಅಂಗನವಾಡಿ ಮುಂದುವರೆಯಿತು. ಯುವಕ ಮಂಡಲದಲ್ಲಿ ಸುಮಾರು 9 ವರ್ಷಗಳ ಕಾಲ ನಡೆಯಿತು. 1994 ರಲ್ಲಿ ಅಂಗನವಾಡಿಯ ಸ್ವಂತ ಜಾಗದಲ್ಲಿ. ಹೊಸ ಕಟ್ಟಡ ರಚನೆಯಾಯಿತು.















ಅಂಗನವಾಡಿಯ ಆರಂಭದಲ್ಲಿ ಕೆಲ ತಿಂಗಳು ನಳಿನಿ ಬಿಳಿಮಲೆ ಅವರು ಶಿಕ್ಷಕಿಯಾಗಿದ್ದರೆ, ಆ ಬಳಿಕ ನೇತ್ರಾವತಿ ಅಂಙಣ ಶಿಕ್ಷಕಿಯಾದರು. ಈ ಮಧ್ಯೆ 1991 ರ ಬಳಿಕ 6 ವರ್ಷಗಳ ಕಾಲ ಕುಸುಮಾ ರವಿರಾಜ್ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಬಳಿಕ ಮತ್ತೆ ಈಗಿರುವ ನೇತ್ರಾವತಿ ಅವರೇ ಶಿಕ್ಷಕಿಯಾಗಿದ್ದಾರೆ.
ಪ್ರಸ್ತುತ ಹೊಸದಾಗಿ ನಿರ್ಮಾಣವಾದ ಅಂಗನವಾಡಿಯ ಕಟ್ಟಡಕ್ಕೆ 22 ಲಕ್ಷ ವೆಚ್ಚವಾಗಿದೆ. ಪೂರ್ತಿ ಹಣವನ್ನು ಎಂ.ಆರ್.ಪಿ.ಎಲ್ ನ ಸಿಆರ್‌ಎಸ್ ಫಂಡ್ ನಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಹೊಸ ಕಟ್ಟಡದಲ್ಲಿ ಸಿಟೌಟ್, ತರಗತಿ ನಡೆಯುವ ಜಾಗ, ಸ್ಟಾಕ್ ರೂಂ, ಅಡುಗೆ ಕೊಠಡಿ, ಶೌಚಾಲಯದ ವ್ಯವಸ್ಥೆ ಹೊಂದಿದೆ. ಹೊರಗಡೆ ಕಪೌಂಡ್ ಮಾಡಲಾಗಿದ್ದು ಮಕ್ಕಳಿಗೆ ಪ್ಲೇ ಏರಿಯಾವು ಇದೆ.
ಜಾಗನೂ ನೀಡಿದ್ರು ಅನುದಾನನೂ ತರಿಸಿದ್ರು
ಐನೆಕಿದು ಅಂಗನವಾಡಿ ಸ್ವಂತ ಜಾಗ ಇದ್ದರೂ ಅಲ್ಲಿಯೇ ಅಂಗನವಾಡಿ ರಚಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ, ಇದನ್ನು ಮನಗಂಡ ಶಿವಕುಮಾರ್ ಕೂಜುಗೋಡು ಅವರು ತಮ್ಮ ಸ್ವಾದೀನದ 10 ಸೆಂಟ್ಸ್ ಜಾಗ ಬಿಟ್ಟು ಕೊಟ್ಟರು. ಅಲ್ಲದೆ ಎಂ.ಆರ್.ಪಿ.ಎಲ್ ಅವರನ್ನು ಸಂಪರ್ಕಿಸಿ ಅನುದಾನವೂ ತರಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಕಟ್ಟಡ ರಚನೆಗೆ ಬೇಕಾದ ನೀರಾವರಿ, ಮತ್ತಿತರ ವ್ಯವಸ್ಥೆ ಒದಗಿಸಿ ಸುಸಜ್ಜಿತ ಕಟ್ಟಡ ರಚಿಸುವಲ್ಲಿ ಕೈ ಜೋಡಿಸಿದರು. ಗುತ್ತಿಗಾರಿನ ಮುತ್ಲಾಜೆ ಕನ್ಸ್ ಟ್ರಕ್ಷನ್ ಶ್ರೇಯಸ್ ಮುತ್ಲಾಜೆ ಕಟ್ಟಡ ರಚಿಸುವ ಜವಾಬ್ದಾರಿ ಹೊತ್ತು ಅತ್ಯಂತ ಸುಂದರವಾದ, ಸಕಲ ವ್ಯವಸ್ಥೆ ಹೊಂದಿರುವ ಅಂಗನವಾಡಿ ಕಟ್ಟಿದ್ದಾರೆ.










