ಪರಿವಾರ ಮುಖಂಡರ, ಕಾರ್ಯಕರ್ತರ ಮನೆಗಳಿಗೆ ನಡುರಾತ್ರಿ ಪೊಲೀಸ್ ಅಧಿಕಾರಿಗಳ ಜಿಪಿಆರ್ ಎಸ್ ಸಂಗ್ರಹ ವಿಚಾರ

0

ನಮ್ಮ ಕಾರ್ಯಕರ್ತರ ತಾಳ್ಮೆಯನ್ನು ಕೆದಕುವ ದುಸ್ಸಾಹಸಕ್ಕೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

ಸ್ವಾತಂತ್ರ್ಯ ನಂತರ ತುರ್ತು ಪರಿಸ್ಥಿತಿ ಘಟನೆ ಬಿಟ್ಟರೆ ಪೊಲೀಸ್ ಇಲಾಖೆ ಹಿಂದೂ ಕಾರ್ಯಕರ್ತರ ಪ್ರಮುಖರ, ಕಾರ್ಯಕರ್ತ ರ ಮನೆಗಳಿಗೆ ನಡುರಾತ್ರಿ ತೆರಳಿ ಅಮಾಯಕರ ಜಿಪಿಆರ್ ಎಸ್ ಸಂಗ್ರಹಿಸುತ್ತಿರುವುದು ಇದೇ ಮೊದಲ ಘಟನೆಯಾಗಿದೆ. ಇಂತಹ ಹಿಂದೂ ವಿರೋಧಿ ಮಾನಸಿಕತೆಗೆ ಜಿಲ್ಲೆಯ,ರಾಜ್ಯದ ಜನ ತಕ್ಕ ಉತ್ತರ ನೀಡಲಿದ್ದಾರೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜೂ.6ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಂಸದರು, “ಜಿಲ್ಲೆಯಲ್ಲಿ ಅವ್ಯಾಹತವಾಗಿ ಡ್ರಗ್ಸ್,ಮುಂತಾದ ಅಕ್ರಮ ಚಟುವಟಿಕೆ ನಡೆಯುತ್ತಿದ್ದರು ಅದನ್ನು ಹತ್ತಿಕ್ಕುವುದು ಬಿಟ್ಟು ಹಿಂದೂ ಮುಖಂಡ ರ, ಕಾರ್ಯಕರ್ತ ರ ಮನೆಗಳಿಗೆ ನಿರಂತರವಾಗಿ ತೆರಳಿ ಕಿರುಕುಳ ನೀಡುತ್ತಿರುವಿರಿ ಇದೇ ಘಟನೆ ಮತ್ತೆ ಮರುಕಳಿಸಿದರೇ ಬಿಜೆಪಿ ಸುಮ್ಮನಿರುವುದಿಲ್ಲ ಇದರ ವಿರುದ್ಧ ಜನಾಂದೋಲನ ನಡೆಸಲಾಗುವುದೆಂದು ಹೇಳಿದರು. ಹಿಂದೂ ಸಂಘಟನೆ ಕಾರ್ಯಕರ್ತ ಕೊಲೆಯಾದರೆ ರೌಡಿ ಶೀಟರ್ ಹಣೆಪಟ್ಟಿ ನೀಡುವ ರಾಜ್ಯ ಸರ್ಕಾರ ಒಂದು ವರ್ಗಾವನ್ನು ಓಲೈಸುವ ತಂತ್ರ ಅನುಸರಿಸುತ್ತಿದೆಯೆಂದರು. ಇದೇ ವೇಳೆ ಬೆಂಗಳೂರು ಲ್ಲಿ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮನತುಗೊಳಿಸಿ ರಾಜ್ಯ ಸರ್ಕಾರ ಹಿಟ್ ಆಂಡ್ ರನ್ ಮಾಡಿದೆಯೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಜಯ್ ಪ್ರಭು,ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕಂದಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕುಸುಮಾಧಾರ ಎ.ಟಿ,ಸುಬೋಧ್ ಶೆಟ್ಟಿ ,ಹೇಮಂತ್ ಮಠ, ಕಿಶನ್ ಜಬಳೆ
ಮತ್ತಿತರರು ಉಪಸ್ಥಿತರಿದ್ದರು