ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ

0

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ‌ ಸಮಿತಿ ಸದಸ್ಯರ ತುರ್ತು ಸಭೆಯು ಜೂ.9ರಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ್ ರವರ ಉಪಸ್ಥಿತಿಯಲ್ಲಿ ನಡೆಯಿತು.

ಸಮಿತಿ ಸದಸ್ಯರಾದ ಚಂದ್ರನ್ ಕೂಟೇಲು, ಶಹೀದ್ ಪಾರೆ, ಅಬ್ದುಲ್ ರಝಾಕ್, ರಾಧಾಕೃಷ್ಣ ಪರಿವಾರಕಾನ ಭಾಗವಹಿಸಿದ್ದರು.

ಹೊರಗುತ್ತಿಗೆ ಸಿಬ್ಬಂದಿಗಳ ವೇತನ ಬಿಡುಗಡೆಗಾಗಿ ಎಲ್ಲಾ ಪ್ರಯತ್ನವನ್ನು ಆರೋಗ್ಯ ಸಮಿತಿಯವರು ಮಾಡುತ್ತಿದ್ದೆವು. ಆದರೆ ಸಿಬ್ಬಂದಿಗಳು ದಿಢೀರನೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆರೋಗ್ಯ ರಕ್ಷಾ ಸಮಿತಿಯ ನ್ನು ಸಂಪರ್ಕಿಸಿರುವುದಿಲ್ಲ ಎಂದು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.

ತುರ್ತು ಸಾಮಾನ್ಯ ಸಭೆಯಲ್ಲಿ ಕಳಕಂಡಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಯವರ ಸೂಚನೆ ಯಂತೆ ಗಳ ಮಾರ್ಚ್ ತಿಂಗಳ ವೇತನ ಬಿಡುಗಡೆಯಾಗಿದ್ದು,
ವೈದ್ಯಕೀಯ ಸಹ ನಿರ್ದೇಶಕರ ಸಹಿ ಯಾದಲ್ಲಿ ಮುಂದಿನ 5 -6 ದಿನಗಳಲ್ಲಿ ಮೇ ವರಗಿನ ವೇತನ ಪಾವತಿ ಯಾಗಲಿದೆ.

ರೋಗಿಗಳ ಹಿತ ದೃಷ್ಟಿಯಿಂದ ಹೊರಗುತ್ತಿಗೆ ಸಿಬ್ಬಂಧಿ ನೌಕರರು ಜೂ.10ರಿಂದ ಕರ್ತವ್ಯಕ್ಕೆ ಹಾಜರಾಗ ಬೇಕೆಂದು ಅವರು ಮನವಿ ಮಾಡಿಕೊಳ್ಳುವುದಾಗಿ ನಿರ್ಣಯಿಸಲಾಯಿತು.

ಇನ್ನು ಮುಂದೆ ಯಾವುದೇ ವೇತನ ಸಮಸ್ಯೆಗಳಿದ್ದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನು ಸಂಪರ್ಕಿಸುವಂತೆ ಹಾಗೂ ಗೈರುಹಾಜರಾಗುವಂತಹ ನಿರ್ಧಾರ ಕೈಗೊಳ್ಳ ಬಾರದಾಗಿ ಕೋರಲಾಯಿತು.

ಹೊರಗುತ್ತಿಗೆ ಸಿಬ್ಬಂದಿ ಇನ್ನೂ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ನೌಕರರೇ ಜವಾಬ್ದಾರರಾಗುತ್ತಾರೆ ಎಂದು ನಿರ್ಣಯ ಕೈಗೊಳ್ಳಲಾಯಿತೆಂದು ಸಮಿತಿ ಸದಸ್ಯ ಶಹೀದ್ ಪಾರೆ ತಿಳಿಸಿದ್ದಾರೆ.