ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಿಂದ ಐ ಎಸ್ ಸಿ ಇ ನ್ಯಾಷನಲ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ 2025-26ರ ಯೋಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಸಿ ಐ ಎಸ್ ಸಿ ಇ ನ್ಯಾಷನಲ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ 2025-26ರ ಮೊದಲ ಹಂತದ ದಕ್ಷಿಣ ಕನ್ನಡ ಹಾಗೂ ಉಡುಪಿ ಅಂತರ್ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯು ಜೂನ್ 11 ರಂದು ಜರುಗಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಹುಡುಗಿಯರ ವಿಭಾಗದ ರಿದಾಮಿಕ್ ಯೋಗಾದಲ್ಲಿ ನಮ್ಮ ಶಾಲೆಯ ಸನುಷ ಕೆ ಕೆ 6ನೇ ತರಗತಿ ಮತ್ತು ಅನುಶ್ರೀ ಎನ್ 8ನೇ ತರಗತಿ ಇವರು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಗ್ರೂಪ್ ಯೋಗದ ವಯೋಮಿತಿ 14ರ ಹುಡುಗರ ವಿಭಾಗದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಶ್ರೀಜಿತ್ ವೈ(7ನೇ ತರಗತಿ), ಜ್ಞಾನಿ ಕೆ ಸಿ(6ನೇ ತರಗತಿ) ಮತ್ತು ಧನ್ವಿತ್ ಕೆ ಜೆ(8ನೇ ತರಗತಿ) ಇವರು ಪ್ರಥಮ ಸ್ಥಾನ, ಹಾಗೂ ಹುಡುಗಿಯರ ವಿಭಾಗದಲ್ಲಿ ಚುಕ್ಕಿ ಸೋನಾ (9ನೇ ತರಗತಿ), ಕೆ ಎ ತನಿಷ್ಕ (8ನೇ ತರಗತಿ), ಆದ್ಯ ಕೆ ಎ(6ನೇ ತರಗತಿ) ಇವರು ಪ್ರಥಮ ಸ್ಥಾನ ಹಾಗೂ ವಯೋಮಿತಿ 17ರ ಹುಡುಗರ ವಿಭಾಗದಲ್ಲಿ ಸ್ವಸ್ತಿಕ್ ಯು ಟಿ (9ನೇ ತರಗತಿ), ಸ್ಕಂದ ಎ ಆರ್ (9ನೇ ತರಗತಿ), ತಶ್ವಿನ್ ಹೆಚ್ ಹೆಚ್ (9ನೇ ತರಗತಿ) ಹಾಗೂ ತನಿಷ್ ಗೌಡ ಕೆ ಎ (9ನೇ ತರಗತಿ) ಇವರು ಪ್ರಥಮ ಸ್ಥಾನ ಹಾಗೂ ವಯೋಮಿತಿ 17 ಹುಡುಗಿಯರ ವಿಭಾಗದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಬೃಂದಾ ಕೆ ಪಿ(8ನೇ ತರಗತಿ), ಸೃಜನ ಕೆ ಎಸ್(9ನೇ ತರಗತಿ) ಇವರು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಮೂರು ವಿಭಾಗದಲ್ಲಿ ನಮ್ಮ ಶಾಲೆಯು ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಶಿಪ್ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು ತಿಳಿಸಿರುತ್ತಾರೆ.