ಮೊಗರ್ಪಣೆ ಶೀ ಕ್ಯಾಂಪಸ್ ವತಿಯಿಂದ ಒಂದು ದಿನದ ಶಿಕ್ಷಕರ ತರಬೇತಿ ಶಿಬಿರ

0

ಮೊಗರ್ಪಣೆ ಎಚ್ ಐ ಜೆ ಕಮಿಟಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಎಕ್ಸಲೆಂಟ್ ಶೀ ಕ್ಯಾಂಪಸ್ ಇದರ ವತಿಯಿಂದ ಮಹಿಳೆಯರಿಗಾಗಿ ಒಂದು ದಿನದ ಶಿಕ್ಷಕರ ತರಬೇತಿ ಶಿಬಿರ ಮೊಗರ್ಪಣೆ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಖ್ಯಾತ ಫಿಝಿಯಾಲಜಿಸ್ಟ್ ಅನ್ಸಾರ್ ರಾಝ ಅವರು ಭಾಗವಹಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಣೆಗೆ ಉತ್ತಮ ಶಿಕ್ಷಕರಾಗಲು ಬೇಕಾದ ಮೌಲ್ಯತೆ ಹಾಗೂ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಚಿಂತನೆಗಳ ಬಗ್ಗೆ ಸುದೀರ್ಘ ತರಬೇತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಶೀ ಕ್ಯಾಂಪಸ್ ನಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ಅಂಕಗಳನ್ನು ಪಡೆದು ಉತೀರ್ಣರಾಗಿ ಸಂಸ್ಥೆಗೆ ಕೀರ್ತಿಯನ್ನು ತಂದ ಮೂವರು ವಿದ್ಯಾರ್ಥಿನಿಗಳು ಹಾಗೂ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸುವ ಕಾರ್ಯಕ್ರಮ ನಡೆಯಿತು.

ಆಡಳಿತ ಸಮಿತಿ ವತಿಯಿಂದ ಸಂಪನ್ಮೂಲ ವ್ಯಕ್ತಿ ಡಾ.ಅನ್ಸಾರ್ ರಾಝ ರವರನ್ನು ಸನ್ಮಾನಿಸಲಾಯಿತು.

ಸಭಾ ವೇದಿಕೆಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕ್ಯಾಂಪಸ್ ನ ಉಸ್ತುವಾರಿ ಹಾಜಿ ಅಬ್ದುಲ್ ಸಮದ್,ಜಮಾಅತ್ ಸದಸ್ಯ ಅಬೂಬಕ್ಕರ್ ಶಾಂತಿನಗರ ಮೊದಲಾದವರು ಉಪಸ್ಥಿತರಿದ್ದರು.

ಹಾಜಿ ಅಬ್ದುಲ್ ಸಮದ್ ಸ್ವಾಗತಿಸಿ ಸಂಸ್ಥೆಯ ಪ್ರಾಂಶುಪಾಲೆ ಕದೀಜ ವಂದಿಸಿದರು.

ಸುಮಾರು 50 ಕ್ಕೂ ಹೆಚ್ಚು ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.