ಜಾಲ್ಸೂರು: ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ಸಭೆ ಹಾಗೂ ವಲಯ ಭಜನಾ ಪರಿಷತ್ ಪದಾಧಿಕಾರಿಗಳ ಸಮಿತಿ ರಚನೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಹಾಗೂ ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ತಿನ ಸಭೆಯನ್ನು ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ತೋಟ ಇವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.

ಈ ಸಭೆಯಲ್ಲಿ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಗೌರವ ಅಧ್ಯಕ್ಷರಾದ ಯತೀಶ್ ರೈ ದುರ್ಗಲಡ್ಕರವರು ದೀಪ ಪ್ರಜ್ಜಲಿಸುವ ಮುಖೇನ ಚಾಲನೆ ನೀಡಿದರು.

ಈ ಸಭೆಯಲ್ಲಿ ಸುಳ್ಯ ತಾಲ್ಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಚಾಲಕರು ಹಾಗೂ ಯೋಜನೆಯ ಯೋಜನಾಧಿಕಾರಿಯದ ಮಾಧವ ಗೌಡರವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ತಾಲೂಕು ಭಜನಾ ಪರಿಷತ್ತಿನ ಕಾರ್ಯವೈಕರಿ ಹಾಗೂ ಭಜನೆಯಿಂದ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು. ಮಕ್ಕಳಿಗೆ ಸಂಸ್ಕಾರ ಕಲಿಸುವಂತಹ ಪುಣ್ಯದ ಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸಬೇಕು ಹಾಗೆಯೇ ಒಂದು ಉತ್ತಮ ಸಂಘಟನೆಯನ್ನು ನಿರ್ಮಾಣ ಮಾಡಲು ಭಜನಾ ಮಂಡಳಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು
ತಿಳಿಸಿದರು. ಹಾಗೂ ಈ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ಸುಬ್ರಮಣ್ಯ ವಲಯದಲ್ಲಿ ನಡೆಸುವುದಾಗಿ ತಿಳಿಸಿದರು.

ಸಮಿತಿ ರಚನೆ:
ಅಧ್ಯಕ್ಷರು – ಜಯರಾಮ ವಿನೋಬನಗರ ಆಡ್ಕರ್.

ಉಪಾಧ್ಯಕ್ಷರು- ಶ್ರೀಮತಿ ಪೂರ್ಣಿಮಾ ಚೊಕ್ಕಾಡಿ.

ಕಾರ್ಯದರ್ಶಿ- ಗಿರಿಧರ ಗೌಡ ಸೋಣಂಗೇರಿ.

ಜೊತೆ ಕಾರ್ಯದರ್ಶಿ – ಪುರುಷೋತ್ತಮ್ ಆಚಾರ್ಯ ಕೆದಿಕಾನ.
ಕೋಶಾಧಿಕಾರಿ – A ಕುಸುಮ ಬೇರ್ಪಡ್ಕ ಮನೆ ಜಾಲ್ಸೂರು .

ತಾಲೂಕು ಗೌರವಾಧ್ಯಕ್ಷರು ಯತೀಶ್ ರೈ ದುಗಲಡ್ಕ.

ತಾಲೂಕು ನಿರ್ದೇಶಕರು – ನಾರಾಯಣ ಕೊಡ್ತುಗುಳಿ

ಸಮಿತಿಯ ಸದಸ್ಯರು
ಶ್ರೀ ಜಯರಾಮ ರೈ ಜಾಲ್ಸೂರು
ಶ್ರೀ ಚಂದ್ರಶೇಖರ್ ತೋಟ ಬೆಳ್ಳಿಪಾಡಿ
ಶ್ರೀಮತಿ ಹೇಮಾವತಿ ಕುಕ್ಕು ಜಡ್ಕ
ಶ್ರೀ ಜಗ್ಗೇಶ್ ಸಂಕೇಶ.
ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ತಾಲೂಕು ಗೌರವಾಧ್ಯಕ್ಷರಾದ ಯತೀಶ್ ರೈ ಅವರು ಮಾತನಾಡುತ್ತಾ ಮಕ್ಕಳಿಗೆ ಭಜನೆ ತರಬೇತಿಯನ್ನು ನೀಡಬೇಕಾಗಿದೆ. ಇದರಿಂದ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಲು ಪ್ರೇರಣೆ ಆಗುತ್ತದೆ ಎಂದು ತಿಳಿಸುತ್ತಾ ಮುಂದಿನ ನೂತನ ಭಜನಾ ಪರಿಷತ್ ಸದಸ್ಯರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಟಿ ಎನ್ ಸತೀಶ್ ರವರು, ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷರು ನಾರಾಯಣ ಕೊಡ್ತಗುಳಿ. ಚಂದ್ರಶೇಖರ್ ತೋಟ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಿಲ್ಲಾ ಸಮನ್ವಧಿಕಾರಿ ಸಂತೋಷ ರವರು ನೂತನ ಪದಾಧಿಕಾರಿಗಳು ಸದಸ್ಯರಿಗೆ ಶುಭ ಹಾರೈಸಿದರು.

ನೂತನವಾಗಿ ಆಯ್ಕೆಯಾದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಆಧ್ಯಕ್ಷರಾದ ಜಯರಾಮ್ ಅಡ್ಕರ್ ಅವರು ಮುಂದಿನ ದಿನಗಳಲ್ಲಿ ವಲಯದ ಭಜನಾ ಪರಿಷತ್ ಉತ್ತಮ ರೀತಿಯಲ್ಲಿ ಮುಂದುವರಿಸಲು ಸಹಕಾರವನ್ನು ಕೋರಿದರು.

ಜಲ್ಸೂರು ವಲಯದಲ್ಲಿ 11 ಭಜನಾ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು. ಮೇಲ್ವಿಚಾರಕರಾದ ಜಯಶ್ರೀ ಸ್ವಾಗತಿಸಿದರು. ಪೈಲಾರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಅವರು ಧನ್ಯವಾದ ಮಾಡಿದರು.