ಮುಕ್ಕೂರು : ಕಾಲು ಬಾಯಿ ಲಸಿಕೆ ಮತ್ತು ಬಂಜೆತನ ನಿವಾರಣಾ ಶಿಬಿರ

0

ಮುಕ್ಕೂರು ಹಾಲು ಉತ್ಪಾದಕರ ಸಂಘ ಮತ್ತು ಪಶು ಸಂಗೋಪನ ಇಲಾಖೆ ಬೆಳ್ಳಾರೆ ಜಂಟಿ ಆಶ್ರಯದಲ್ಲಿ
ಕಾಲುಬಾಯಿ ಲಸಿಕೆ ಮತ್ತು ಬಂಜೆತನ ನಿವಾರಣ ಶಿಬಿರವು ಮುಕ್ಕೂರು ಹಾಲು ಉತ್ಪಾದಕರ ಸಂಘದ ಮುಂಬಾಗದಲ್ಲಿ ಜೂ.14 ರಂದು ನಡೆಯಿತು.

ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವರವರು ಚಾಲನೆ ನೀಡಿದರು. ಪಶು ವೈಧ್ಯಾಧಿಕಾರಿ ಡಾ.ಬಿ.ಕೆ.ಸೂರ್ಯನಾರಾಯಣ ಲಸಿಕೆ ಕುರಿತು ಮಾಹಿತಿ ನೀಡಿದರು.

ಕಾಲು ಬಾಯಿ ಲಸಿಕೆ ಮತ್ತು ಬಂಜೆತನ ನಿವಾರಣ ಶಿಬಿರದಲ್ಲಿ 147 ದನ, 38 ಕರುವಿಗೆ ಲಸಿಕೆ ನೀಡಲಾಯಿತು. 75 ಮನೆಗಳಿಗೆ ಭೇಟಿ ನೀಡಲಾಯಿತು. 7 ನೇ ಸುತ್ತಿನ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ಮತ್ತು ಗಂಟು ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಿಬಂದಿ ಯಶೋಧ, ಪಶು ಸಖಿಯರಾದ ಪ್ರತಿಮಾ, ರಾಜೇಶ್ವರಿ, ಗೀತಾ ಕೊಡಿಯಾಲ, ಪದ್ಮಾವತಿ, ಮೀನಾಕ್ಷಿ, ಸಂಘದ ಕಾರ್ಯದರ್ಶಿ ಮಾಲತಿ, ಹಾಲು‌ ಪರೀಕ್ಷಕಿ ಲಲಿತಾ ಪಿ.ಬಿ., ಚಂದ್ರಶೇಖರ ಕಾನಾವು ಕಂಪ, ಕೃಷ್ಣ ಪ್ರಸಾದ್ ಕರ್ಪುತ್ತಾರು, ಚಂದ್ರಶೇಖರ ಕರ್ಪುತ್ತಾರು ಮೊದಲಾದವರು ಸಹಕರಿಸಿದರು.