ಕೆ.ವಿ.ಜಿ ಕ್ಯಾಂಪಸ್ ಬಳಿಯ ಅಟೋ ನಿಲ್ದಾಣದ ಮೇಲೆ ಮತ್ತು ತಾಲೂಕು ಕಚೇರಿಯ ಮೇಲ್ಚಾವಣಿಯ ಮೇಲೆ ಬಿದ್ದ ಮರದ ತೆರವು ಕಾರ್ಯಾಚರಣೆಯನ್ನು ಮಾಡಲಾಯಿತು.















ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿಕೊಟ್ಟ ಅಟೋ ನಿಲ್ದಾಣ ಇದಾಗಿದ್ದು ಆನಂದ ಇಲೆಕ್ಟ್ರಿಕಲ್ಸ್ ಮಾಲಕ ಲಯನ್ ಆನಂದ ಪೂಜಾರಿ ಯವರು ಕ್ರೈನ್ ತರಿಸಿ ಮರವನ್ನು ಮೇಲಕ್ಕೆತ್ತಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಹಾಗೂ ಸದಸ್ಯರು ಮತ್ತು ಅಟೋ ಚಾಲಕರು ಸಹಕರಿಸಿದರು.










