ಚೊಕ್ಕಾಡಿ ಪದವು ದುರ್ಗಾವಾಹಿನಿ ಶಾಖೆಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

0

ಅಮರಪಡ್ನೂರಿನ ಚೊಕ್ಜಾಡಿ ಪದವು ಮಾತೃಶಕ್ತಿ ದುರ್ಗಾವಾಹಿನಿ ವಜ್ರಕಾಯ ಶಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಶಾಖೆಯ ಅಧ್ಯಕ್ಷೆ ಶ್ರೀಮತಿ ಅನಿತಾ ಕುಕ್ಕುಜಡ್ಕ ಹಾಗೂ ಪಂಚಾಯತ್ ಸದಸ್ಯರಾದ ಕೃಷ್ಣ ಪ್ರಸಾದ್ ಮಾಡಬಾಕಿಲು, ಶ್ರೀಮತಿ ಸೀತಾ ಹೆಚ್ ಮತ್ತು ದುರ್ಗಾವಾಹಿನಿ ಶಾಖೆಯ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿದರು. ಪಂಚಾಯತ್ ಸಿಬ್ಬಂದಿ ಹರೀಶ್ ಸಹಕರಿಸಿದರು.