ಬಾರೀ ಮಳೆ : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಶಾಲೆಗಳಿಗೂ (ಜೂ.16) ರಜೆ ಘೋಷಣೆ

0

ಪರಿಷ್ಕೃತ ಆದೇಶ

ಬಾರೀ ಮಳೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗಳು ಆದೇಶ ಮಾಡಿದ್ದಾರೆ.

ಜೂ.15ರಂದು ಸಂಜೆ ಹೊರಡಿಸಿದ ಆದೇಶದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕು ಹೊರತು ಪಡಿಸಿ ಜಿಲ್ಲೆಯ ಇತರ ತಾಲೂಕಿಗೆ ರಜೆ ಎಂದು ಆದೇಶ ಮಾಡಲಾಗಿತ್ತು.

ಇಂದು‌ಬೆಳಗ್ಗೆ ಪರಿಷ್ಕೃತ ಆದೇಶ ಮಾಡಿದ್ದು ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಿಸಿ‌ ಆದೇಶ ಮಾಡಿದ್ದಾರೆ.