














ಕಲ್ಲುಗುಂಡಿಯ ಕಡಪಾಲ ದಿ. ಹೊನ್ನಪ್ಪ ಆಚಾರ್ಯರ ಪತ್ನಿ ಶ್ರೀಮತಿ ಸುಬ್ಬಮ್ಮ ಆಚಾರ್ಯ ಅಸೌಖ್ಯದಿಂದ ಜೂ. 15 ರಂದು ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ವಾಸ್ತುಶಿಲ್ಪಿ ಪದ್ಮನಾಭ ಆಚಾರ್ಯ ಕಡಪಾಲ, ಗೋಪಾಲಕೃಷ್ಣ ಆಚಾರ್ಯ ಕಡಪಾಲ, ಪುತ್ರಿಯರಾದ ಶ್ರೀಮತಿ ಸರೋಜ, ಶ್ರೀಮತಿ ತೀರ್ಥವತಿ, ಶ್ರೀಮತಿ ಇಂದಿರಾ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










