ದ. ಕ ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಗಳ ಒಕ್ಕೂಟ ರಚನೆ : ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಸಂಚಾಲಕರಾಗಿ ಆಯ್ಕೆ

0

ದ. ಕ. ಮತ್ತು ಉಡುಪಿ ಜಿಲ್ಲೆಗಳ 2 ನಗರಾಭಿವೃದ್ಧಿ 6 ಸ್ಥಳೀಯ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರು ಗಳು ಮತ್ತು ಸದಸ್ಯರುಗಳ ಸಭೆಯನ್ನು ಮಂಗಳೂರು ಡಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು ಸದ್ರಿ ಸಭೆಯಲ್ಲಿ ನಗರ ಮತ್ತು ಗ್ರಾಮಾoತರ ಪ್ರದೇಶ ಗಳಲ್ಲಿ 9/11,ಕನ್ವರ್ಷನ್, ಕಟ್ಟಡ ಪರವಾನಿಗೆ, ಏಕ ನಿವೇಶನ ಅನುಮೋದನೆ, ವಿನ್ಯಾಸ ನಕ್ಷೆ, ಮಹಾಯೋಜನೆ,ಮೊದಲಾದ ಸೌಲಭ್ಯ ಗಳಲ್ಲಿ ಕಾನೂನಿನ ಸರಳೀಕರಣ ವಿಶಿಷ್ಟ ಬೌಗೋಳಿಕ ಹಿನ್ನಲೆಯ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚನೆ ಮೊದಲಾದ ಸಮಸ್ಯೆ ಗಳ ಬಗ್ಗೆ ಸರ್ಕಾರ ದ ಮಟ್ಟದಲ್ಲಿ ಪ್ರಯತ್ನ ನಡೆಸಲು ದ. ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಗಳ ಒಕ್ಕೂಟ ರಚಿಸಲಾಯಿತು.


ಒಕ್ಕೂಟದ ಅಧ್ಯಕ್ಷ ರಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಸಂಚಾಲಕರು ಗಳಾಗಿ ಸುಳ್ಯ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರ್ ಆಯ್ಕೆಯಾದರು. ಸಭೆಯಲ್ಲಿ ದ. ಕ. ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ನಗರಾಭಿವೃದ್ಧಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು