ಮನವಿಗೆ ಸ್ಪಂದಿಸಿದ ಶಾಸಕರು















ಸಂಜೆ 4 ಗಂಟೆಗೆ ಗುತ್ತಿಗಾರಿನಿಂದ ಹೊರಟು ಬಳ್ಪ ಮೂಲಕ ಪಂಜಕ್ಕೆ ಸಂಚರಿಸುವ ಬಾಳುಗೋಡು ಬಸ್ಸಿನ ಸಮಯವನ್ನು ಬದಲಾಯಿಸುವಂತೆ ಸೃಜನ್ ಗೌಡ ಎನ್.ಎ. ರವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ನೀಡಿದ್ದು, ಶಾಸಕರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮಯ ಬದಲಾವಣೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಮೊದಲು ಬಾಳುಗೋಡಿನಿಂದ ಬಂದು 4 ಗಂಟೆಗೆ ಗುತ್ತಿಗಾರಿನಿಂದ ಹೊರಡುತ್ತಿದ್ದುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಈ ಬಸ್ಸಿನಲ್ಲಿ ಸಂಚರಿಸಲು ಆಗುತ್ತಿರಲಿಲ್ಲ. ಈ ಬಸ್ ಹೋದೇ ಮತ್ತೆ ಆ ಮಾರ್ಗದಲ್ಲಿ ಬೇರೆ ಬಸ್ ಸಂಚಾರವಿಲ್ಲ. ಇದೀಗ ಸಮಯ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿರುವುದಾಗಿ ತಿಳಿದುಬಂದಿದೆ.
ಶೃಜನ್ ಗೌಡ ಎನ್.ಎ. ಗುತ್ತಿಗಾರು ಪಿ.ಎಂ.ಶ್ರೀ ಸರಕಾರಿ ಹಿ.ಪ್ರಾ. ಶಾಲಾ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸುಬ್ರಹ್ಮಣ್ಯ ತಾ.ಪಂ. ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ ಮತ್ತು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರ ಪುತ್ರ. ಪ್ರಸ್ತುತ ಗುತ್ತಿಗಾರು ಪಿ.ಎಂ.ಶ್ರೀ ಸರಕಾರಿ ಹಿ.ಪ್ರಾ. ಶಾಲಾ ವಿದ್ಯಾರ್ಥಿ ನಾಯಕನಾಗಿದ್ದಾನೆ.










