ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗಗಳ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಪಿ.ಡಿ.ಒ, ಕಾರ್ಯದರ್ಶಿ, ಸಿಬ್ಬಂದಿಗಳ ಖಾಲಿ ಇರುವ ಹುದ್ದೆಯನ್ನು ಶೀಘ್ರ ಭರ್ತಿ ಮಾಡಿ

0

ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದಿಂದ ದ. ಕ. ಉಸ್ತುವಾರಿ ಸಚಿವರಿಗೆ ಮನವಿ

ಸುಳ್ಯ ತಾಲೂಕಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಇಲ್ಲಿ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರ ಹುದ್ದೆ ಖಾಲಿ ಇದ್ದು, ಹಾಲಿ ಇರುವ ಒಬ್ಬರೇ ಸಹಾಯಕ ಇಂಜಿನಿಯರು ಸುಳ್ಯ ತಾಲೂಕಿನ 25 ಗ್ರಾ.ಪಂ ಮತ್ತು ಕಡಬ ತಾಲೂಕಿನ 3 ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಗ್ರಾಮ ಪಂಚಾಯತ್‌ಗಳಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ.

ಅಲ್ಲದೇ ಸುಳ್ಯದ 25 ಗ್ರಾಮ ಪಂಚಾಯತ್ ಗಳಲ್ಲಿ ಸುಮಾರು ಅರ್ದಕ್ಕಿಂತ ಕಡಿಮೆ ಪಿಡಿಒ. ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಪಂಗಳಲ್ಲಿ ಸಿಬ್ಬಂದಿ ಕೊರತೆ ಇರುತ್ತದೆ. ಇದರಿಂದ ಈ ಎರಡು ಇಲಾಖೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೌಕರು ಇಲ್ಲದೇ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಮೇಲಿನ ಎರಡು ಇಲಾಖೆಗಳಲ್ಲಿ ಖಾಲಿ ಇರುವ ಇಂಜಿನಿಯರರು, ಪಿಡಿಒ, ಕಾರ್ಯದರ್ಶಿ, ಗ್ರಾ.ಪಂ ಸಿಬ್ಬಂದಿಗಳ ಹುದ್ದೆಯನ್ನು ಭರ್ತಿ ಮಾಡಬೇಕೆಂದು ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ದ ವತಿಯಿಂದ ಮನವಿ ನೀಡಲಾಯಿತು.

ಇಂದು ಸುಳ್ಯಕ್ಕೆ ಆಗಮಿಸಿದ ದ. ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಮನವಿ ನೀಡಿದರು.