ಸುಳ್ಯ ತಾಲೂಕು ಆಸ್ಪತ್ರೆ : ಆರೋಗ್ಯ ರಕ್ಷಾ ಸಮಿತಿ ಸಭೆ

0

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಭೆಯು‌ ಸಮಿತಿಯ ಅಧ್ಯಕ್ಷರಾದ ಕುಮಾರಿ ಭಾಗೀರಥಿ ಮುರುಳ್ಯ ಇವರ ಅಧ್ಯಕ್ಷತೆಯಲ್ಲಿ ಆರೋಗ್ಯ ಜೂ.16ರಂದು ನಡೆಯಿತು.

ಚರ್ಚೆಯಾದ ವಿಷಯಗಳು

ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಡಿ ವೇತನ ವಿಳಂಬದ ಬಗ್ಗೆ, ಸಭೆಯಲ್ಲಿ ಪ್ರಸ್ತಾಪಿಸಿದಾಗ ಶಾಸಕರು ಸಂಬಂಧ ಪಟ್ಟ ಸಂಸ್ಥೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಪಿಎಫ್ ಮತ್ತು ಇಎಸ್ ಐ ಪಾವತಿಯಾದ ಬಗ್ಗೆ, ಗ್ರೂಪ್ ಡಿ ಗಳು ಬರೆದು ಕೊಡುವಂತೆ ತಿಳಿಸಲಾಯಿತು.

ಆಸ್ಪತ್ರೆ ಸಿಬ್ಬಂದಿಗಳು ಸಾರ್ವಜನಿಕರೊಡನೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ತಿಳಿಸಲಾಯಿತು.

ಬೆಳಿಗ್ಗಿನ ಆಹಾರದ ಬಗ್ಗೆ ಚರ್ಚಿಸಲಾಗಿ ಈಗಿನ ಹೊಸ ಟೆಂಡರ್ ನಲ್ಲಿ ರೋಗಿಗಳಿಗೆ ಇಡ್ಲಿ, ತೋವೆ ನೀಡಲು ಕಾರ್ಯದೇಶ ಆಗಿರುತ್ತದೆ. ಈಗಾಗಲೇ ಗ್ರೂಪ್ ಡಿ ನೌಕರರ ಕೈಯಿಂದ ಅಡುಗೆ ಮಾಡಿಸಲಾಗಿದ್ದು ಒಬ್ಬರಿಂದ ಕಾರ್ಯನಿರ್ವಹಣೆ ಅಸಾಧ್ಯವಾಗಿರುವುದರಿಂದ ಬೆಳಿಗ್ಗೆ 4ರಿಂದ 11 ಗಂಟೆವರೆಗೆ ಅಡುಗೆ ವಿಭಾಗಕ್ಕೆ ಸಹಾಯಕವನ್ನು ರಕ್ಷಾ ಸಮಿತಿಯ ವತಿಯಿಂದ ನೇಮಕ ಮಾಡಿಕೊಳ್ಳುವುದು ಎಂದು ತೀರ್ಮಾನಿಸಲಾಯಿತು.

ಗ್ರೂಪ್ ಡಿ ನೌಕರರು ಸಾಮೂಹಿಕವಾಗಿ ಕೆಲಸಕ್ಕೆ ಹಾಜರಾಗದಾಗ ಒಂದು ವಾರದ ಮೊದಲು ಆಡಳಿತ ವೈದ್ಯಾಧಿಕಾರಿಯವರ ಗಮನಕ್ಕೆ ತರುವುದು. ಒಂದು ದಿನದ ಹಿಂದೆ ತಿಳಿಸಿ ಮರುದಿನದಿಂದ ಕೆಲಸಕ್ಕೆ ಬಾರದೆ ಗೈರು ಹಾಜರಾಗಬಾರದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳಿಗೆ ತಿಳಿಸಲಾಯಿತು.

ಶುಶೂಷಕಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ರೋಗಿಗಳೊಂದಿಗೆ ಸೌಹರ್ದಯುತವಾಗಿ ನಡೆದುಕೊಳ್ಳುವಂತೆ ಶಾಸಕರು ಸಭೆ ಯಲ್ಲಿ ಸಿಬ್ಬಂದಿಳಿಗೆ ಸೂಚಿಸಿದರು.

ಆಸ್ಪತ್ರೆಯ ಸ್ವಚ್ಛತೆಯನ್ನು ರೋಗಿಗಳು ಮತ್ತು ಅವರ ಪರಿಚಾಲಕರು ಕಾಪಾಡುವುದು – ಆಸ್ಪತ್ರೆಯಲ್ಲಿ ಎಲ್ಲಿಯಾದರು ಉಗುಳುವುದನ್ನು ತಪ್ಪಿಸಲು ಅಂತವರಿಗೆ ದಂಡನೆ ಶುಲ್ಕವನ್ನು ವಿಧಿಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

2025ನೇ ಸಾಲಿನ ವರ್ಗಾವಣೆ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿ ಖಾಲಿ ಇರುವ ಎಲುಬು ತಜ್ಞರು ಜನರಲ್ ಸರ್ಜನ್ ಕ್ಷ-ಕಿರಣ ತಂತ್ರಜ್ಞರು ಪ್ರಯೋಗಶಾಲಾ ತಂತ್ರಜ್ಞರು ಇವರುಗಳ ಹುದ್ದೆಯನ್ನಯ ಭರ್ತಿಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಬರೆದುಕೊಳ್ಳುವುದು ಎಂದು ತೀರ್ಮಾನಿಸಲಾಯಿತು.

1970ನೇ ಸಾಲಿನ ಹಳೆಯ ಶವಾಗಾರ ಕೆಡವಲು ಮೌಲ್ಯಮಾಪನ ನಡೆಸಲು ಇಂಜಿನಿಯರ್ ವಿಭಾಗಕ್ಕೆ ಬರೆದುಕೊಳ್ಳುವುದು ಎಂದು ತೀರ್ಮಾನಿಸಲಾಯಿತು.

ಕ್ಯಾಂಟೀನ್ ಕೊಟೇಶನ್ ಆಗುವರೆಗೆ ಈಗಿನ ಕ್ಯಾಂಟೀನ್ ನಡೆಸುವರೇ ಮುಂದುವರೆಸಿಕೊಂಡು ಹೋಗುವುದು ಎಂದು ತೀರ್ಮಾನಿಸಲಾಯಿತು.

ತಾಲೂಕು ಆಸ್ಪತ್ರೆಯಲ್ಲಿ 90ಜನ ಸಿಬ್ಬಂದಿಗಳು ಕಾರ್ಯನಿರ್ವಾಹಿಸುತ್ತಿದ್ದು ಈಗಾಗಲೇ 10 ವಸತಿಗೃಹಗಳಿದ್ದು ಹೆಚ್ಚುವರಿ ವಸತಿಗೃಹವನ್ನು ನಿರ್ಮಾಣ ಮಾಡುವಂತೆ ಮೇಲಾಧಿಕಾರಿಗಳಿಗೆ ಬರೆಯುವುದು ಎಂದು ತೀರ್ಮಾನಿಸಲಾಯಿತು.

ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿಗೆ ಬೇಕಾದ ವೀಲ್ ಚಯರ್ ಒದಗಿಸಲು ಎಂ.ಆರ್.ಪಿ.ಎಲ್. ಗೆ ಗೆ ಹಾಗೂ ಕೆ.ವಿ.ಜಿ ಸಂಸ್ಥೆಗೆ ಬರೆದುಕೊಳ್ಳುವುದು ಎಂದು ತೀರ್ಮಾನಿಸಲಾಯಿತು.

ತುರ್ತು ಚಿಕಿತ್ಸಾ ವಿಭಾಗ ಹಾಗೂ ಐಸಿಯು ವಿಭಾಗಕ್ಕೆ ಮೊಬೈಲ್ ಫೋನ್ ಖರೀದಿಸಿ ಆ ನಂಬರ್ ನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮಕೈಗೊಳ್ಳುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.