ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಯೋಗ ಸಮಾವೇಶ

0

ಜೂನ್ 21 ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇಲ್ಲಿಯ ತಜ್ಞ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಯೋಗ ಸಮಾವೇಶ ಕಾರ್ಯಕ್ರಮ ಜೂನ್ 17 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಪುನೀತ್ ರಾಘವೇಂದ್ರ ಕುಂಟುಕಾಡು, ಪ್ರಾಂಶುಪಾಲರು, ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರು ಭಾಗವಹಿಸಿದ್ದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಯೋಗದ ಪ್ರಾತ್ಯಕ್ಷಿಕೆಯ ಜೊತೆಗೆ ಅವುಗಳಿಂದ ದೊರೆಯುವ ದೈಹಿಕ ಮತ್ತು ಮಾನಸಿಕ ಉಪಯೋಗಗಳನ್ನು, ವೈಜ್ಞಾನಿಕ ಅಧ್ಯಯನಗಳ ಮಾಹಿತಿಗಳನ್ನು ತಿಳಿಸಿಕೊಡಲಾಯಿತು. ಕುರ್ಚಿಯಲ್ಲೇ ಕುಳಿತು‌ ಮಾಡಬಹುದಾದ ಸೂರ್ಯನಮಸ್ಕಾರವನ್ನು ವಿಶೇಷವಾಗಿ ತಿಳಿಸಿಕೊಡಲಾಯಿತು ವಿದ್ಯಾರ್ಥಿಗಳು ತಮ್ಮ ಓದಿನ ಚಟುವಟಿಕೆಗೆ ಪೂರಕವಾಗಿ ಜ್ಞಾಪಕ ಶಕ್ತಿ ಹೆಚ್ಚಿಸುವ ಪ್ರಾಣಾಯಾಮಗಳನ್ನೂ ಕಲಿತುಕೊಂಡರು.

ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್‌ ರವರು ಯೋಗದ ಪ್ರಾಮುಖ್ಯತೆ ಯನ್ನೂ ತಿಳಿಸಿಕೊಡುತ್ತಾ ಪ್ರತಿನಿತ್ಯ ಯೋಗದ ಅಭ್ಯಾಸ ಮಾಡುವುದರಿಂದಾಗುವ ಆರೋಗ್ಯ ಲಾಭಗಳನ್ನು ತಿಳಿಸಿಕೊಟ್ಟರು‌. ಆಧುನಿಕ ಜೀವನಶೈಲಿಯಿಂದ ಕಾಡುತ್ತಿರುವ ಹೊಸ ಹೊಸ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಯೋಗ ಚಿಕಿತ್ಸೆಯು ಒಂದು ಉತ್ತಮ ಔಷಧ ಪದ್ಧತಿ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಡಾ. ಶೃತಿ ರೈ ಇವರು ಸಂಯೋಜಿಸಿದರು. ಈ ಯೋಗ ಸಮಾವೇಶವನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಪುಣೆ, ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವರು ಜಂಟಿಯಾಗಿ ಆಯೋಜಿಸಿದ್ದರು.