ನಾರ್ಣಕಜೆ ಸ.ಹಿ.ಪ್ರಾ.ಶಾಲಾ ಮಂತ್ರಿಮಂಡಲವು ಜೂ. 14ರಂದು ಮೊಬೈಲ್ ಆಪ್ ಚುನಾವಣೆಯ ಮೂಲಕ ರಚನೆಯಾಗಿದ್ದು, ಶಾಲಾ ನಾಯಕನಾಗಿ ಚಿಂತನ್ ಕೆ.ಆಯ್ಕೆಯಾಗಿದ್ದಾರೆ.















ಉಪಮುಖ್ಯಮಂತ್ರಿಯಾಗಿ ಸಾನ್ವಿತ್ ಆರನೇ ತರಗತಿ, ಗೃಹಮಂತ್ರಿಯಾಗಿ ಚಿಂತನ್ ಎಸ್., ಉಪಗ್ರಹಮಂತ್ರಿಯಾಗಿ ಸಾನ್ವಿತ್, ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಚಿಂತನ್ ಕೆ., ಸಹಾಯಕರಾಗಿ ಯತಿನ್, ಆಹಾರ ಆರೋಗ್ಯ ಸ್ವಚ್ಛತೆ ಮಂತ್ರಿಯಾಗಿ ಬಿಂದುಶ್ರೀ, ಸಹಾಯಕರಾಗಿ ನಿಶಾನ್ ಎನ್., ವಿದ್ಯಾ ಮಂತ್ರಿಯಾಗಿ ಸಾನ್ವಿತ್, ಉಪ ವಿದ್ಯಾ ಮಂತ್ರಿಯಾಗಿ ಚಿರಶ್ರೀ, ವಾರ್ತಾ ಮಂತ್ರಿಯಾಗಿ ಕವನ್, ಉಪವಾರ್ತಾಮಂತ್ರಿಯಾಗಿ ಪುಣ್ಯ ಜಿ. ಸಾಂಸ್ಕೃತಿಕ ಮಂತ್ರಿಯಾಗಿ ಮೋಕ್ಷಿತ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ, ಕ್ರೀಡಾ ಮಂತ್ರಿಯಾಗಿ ನಿಶಾಂತ್, ಉಪ ಕ್ರೀಡಾ ಮಂತ್ರಿಯಾಗಿ ದಕ್ಷಿತ್, ವಿರೋಧ ಪಕ್ಷದ ನಾಯಕನಾಗಿ ದಿಗಂತ್, ತೇಜಸ್, ಸಹಾಯಕನಾಗಿ ಜಿತಿನ್, ನಿಶಾಂತ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೂರ್ಣಿಮಾ ಎಂ.ಆರ್. ಉಪಸ್ಥಿತರಿದ್ದು ಎಲ್ಲಾ ಮಂತ್ರಿಗಳ ಜವಾಬ್ದಾರಿಯನ್ನು ತಿಳಿಸಿಕೊಟ್ಟರು. ಸಹ ಶಿಕ್ಷಕಿ ಶ್ರೀಮತಿ ಮನೋರಮಾ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕಿಯಾದ ಶ್ರೀಮತಿ ಸುಮಿತ್ರ, ಗೌರವ ಶಿಕ್ಷಕಿ ದುರ್ಗಾಶ್ರೀ ಉಪಸ್ಥಿತರಿದ್ದರು.










