ಕೊಡಗು ಸಂಪಾಜೆ : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ, ಅಪಾಯದಿಂದ ಪಾರು

0

ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ರಸ್ತೆಯ ಪಕ್ಕದ ಚರಂಡಿಗೆ ಪಲ್ಟಿಯಾದ ಘಟನೆ ಜೂ.20 ರಂದು ನಡೆದಿದೆ.

ಸಂಪಾಜೆಯಿಂದ ಅರಮನೆತೋ ಟಕ್ಕೆ ಪಿಕಪ್ ನಲ್ಲಿ ಕೆಲಸದವನ್ನು ಮತ್ತು ಸಿಮೆಂಟ್ ಲೋಡ್
ಕೊಂಡೊಯ್ಯುವ ವೇಳೆ ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ತಿರುವಿನಲ್ಲಿ ಪಿಕಪ್ ಚಾಲಕನ ನಿಯoತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ತಲೆಕೆಳಗಾಗಿ ಪಲ್ಟಿಯಾಗಿದೆ. ಪರಿಣಾಮವಾಗಿ ಪ್ರಯಾಣಿಕರಿಗೆ ಸಣ್ಣ ಪುಟ್ಟಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೇವರಗುಂಡ ಪ್ರಸಾದ್ ಅವರ ಪಿಕಪ್ ಎಂದು ತಿಳಿದುಬಂದಿದೆ.