ಪುತ್ತೂರು- ಪೆರ್ಲಂಪಾಡಿ-ಬೆಳ್ಳಾರೆ ಬಸ್ಸು ಸಂಚಾರ ವ್ಯವಸ್ಥೆ ಸರಿಪಡಿಸಲು ಪ್ರದೀಪ್ ಕುಮಾರ್ ರೈ ಪಾಂಬಾರು ಒತ್ತಾಯ

0

ಪುತ್ತೂರು ಪೆರ್ಲಂಪಾಡಿ ಬೆಳ್ಳಾರೆ ಹಾಗೂ ಪುತ್ತೂರು ಪೆರ್ಲಂಪಾಡಿ ಪಾಂಬಾರು ಬೆಳ್ಳಾರೆ ಬಸ್ಸು ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಇತ್ತೀಚಿಗೆ ಪುತ್ತೂರು ವಿಭಾಗೀಯ ಸಂಚಾರ ನಿಯಂತ್ರಣ ಅಧಿಕಾರಿ ಜೈಶಾಂತ್ ಕುಮಾರ್ ಹಾಗೂ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ರನ್ನು ಭೇಟಿ ಮಾಡಿ ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಜೂ.19ರಂದು ಮನವಿ ಮಾಡಿದ್ದಾರೆ.

ಬೆಳಿಗ್ಗೆ 8.15ಕ್ಕೆ ಪುತ್ತೂರು ಬಸ್ಸು ನಿಲ್ದಾಣದಿಂದ ಬಿಡುವ ಪುತ್ತೂರು ಪೆರ್ಲಂಪಾಡಿ, ಬೆಳ್ಳಾರೆ ಕಲ್ಪನೆ ಬಸ್ಸು ಹಾಗೂ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಬಸ್ಸು ನಿಲ್ದಾಣದಿಂದ ಬಿಡುವ ಪುತ್ತೂರು ಪೆರ್ಲಂಪಾಡಿ ಪಾಂಬಾರು ಬೆಳ್ಳಾರೆ ಕಲ್ಪನೆ ಬಸ್ಸು ಸುಮಾರು ಎರಡು ತಿಂಗಳುಗಳಿ0ದ ಈ ರಸ್ತೆಯಲ್ಲಿ ಚಲಿಸುತ್ತಿಲ್ಲ.

ಇದು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾದ ಬಸ್ಸಾಗಿದ್ದು ಇದರ ಸಂಚಾರವನ್ನು ಪುನರ್ ಸ್ಥಾಪಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಒತ್ತಾಯಿಸಿದರು. ಅದಲ್ಲದೆ ಪಾಂಬಾರು ಬಸ್ಸಿಗೆ ಪಾಂಬಾರು ಎಂಬ ನಾಮಫಲಕವನ್ನು ಅಳವಡಿಸಿಲ್ಲ ಇದನ್ನು ಕೂಡ ಸರಿಪಡಿಸುವಂತೆ ಕೆಪಿಸಿಸಿ ಸಂಯೋಜಕರಾದ ಪ್ರದೀಪ್ ಕುಮಾರ್ ರೈ ಪಾಂಬಾರು ಇವರು ಒತ್ತಾಯಿಸಿದರು.