ಬೆಂಗಳೂರು ವಿಧಾನ ಸೌಧದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅಕ್ಷಯ ಬಾಬ್ಲುಬೆಟ್ಟು ಆಯ್ಕೆ

0

ಕರ್ನಾಟಕ ಸರಕಾರ, ಆಯುಷ್ ಇಲಾಖೆ, 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯೋಗ ಸಂಗಮ ಬೆಂಗಳೂರು ವಿಧಾನ ಸೌಧದಲ್ಲಿ ಜೂನ್ 21 ರಂದು ನಡೆಯಲಿದೆ. ಈ ಸರಕಾರಿ ಕಾರ್ಯಕ್ರಮ ದಲ್ಲಿ ಅಂತಾರಾಷ್ಟ್ರೀಯ ಯೋಗ ಪಟು ಅಕ್ಷಯ ಬಾಬ್ಲುಬೆಟ್ಟು ರವರನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ರವರು ವಿಶೇಷ ಮುತುವರ್ಜಿ ವಹಿಸಿ ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಿದ್ದಾರೆ.

ಅಕ್ಷತಾ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೆಕಲ್ಲಿನಲ್ಲಿ 05 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಏನೆಕಲ್ಲು (ಬಾಬ್ಲುಬೆಟ್ಟು ) ನಿವಾಸಿ ಮೋಹನ್ ಕುಮಾರ್ ಮತ್ತು ಶ್ರೀಮತಿ ದಿವ್ಯ ಕುಮಾರಿ ರವರ ಪುತ್ರಿ. ನಿರಂತರ ಯೋಗ ಕೇಂದ್ರ ಏನೇಕಲ್ಲು ಇಲ್ಲಿ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಯೋಗ ಶಿಕ್ಷಣ ಪಡೆಯುತ್ತಿದ್ದಾರೆ. ಯೋಗಾಸನ ದಲ್ಲಿ 02 ವಿಶ್ವ ದಾಖಲೆ ಮತ್ತು 6 ಚಿನ್ನದ ಪದಕ, 1 ಬೆಳ್ಳಿ, 3 ಕಂಚಿನ ಪದಕ ಗಳಿಸಿದ್ದಾರೆ.