














ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿದ್ದ
ಕೊರಗಪ್ಪ ಗೌಡ ದರ್ಖಾಸ್ತು ಪಾಲೆಪ್ಪಾಡಿ ಇವರು ಇತ್ತೀಚೆಗೆ ನಿಧನರಾಗಿದ್ದು ಅವರ ನಾಮಿನಿಯವರಿಗೆ ಸಂಘದ ವತಿಯಿಂದ ಶತಾಬ್ದಿ ನಿಧಿಯನ್ನು ಜೂ.20 ರಂದು ನಡೆದ ಸಂಘದ ಮಾಸಿಕ ಸಭೆಯಲ್ಲಿ ವಿತರಣೆ ಮಾಡಲಾಯಿತು.
ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹೇಶ್ ಜಬಳೆ,ಡಿಸಿ.ಸಿ.ಬ್ಯಾಂಕ್ ಪ್ರತಿನಿಧಿ ರತನ್,
ನಿರ್ದೇಶಕರು,ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ಉಪಸ್ಥಿತರಿದ್ದರು.










