ದೇವರಕೊಲ್ಲಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಬೆಂಕಿ , ಚಾಲಕ ಅಪಾಯದಿಂದ ಪಾರು

0

ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹಿಡಿದ ಘಟನೆ ದೇವರಕೊಲ್ಲಿ ಸಮೀಪ ಜೂ.21 ರಂದು ಬೆಳಿಗ್ಗೆ ಸಂಭವಿಸಿದೆ.

ಮೈಸೂರಿನಿಂದ ಕಾರ್ಕಳಕ್ಕೆ ಭತ್ತ ತುಂಬಿಸಿಕೊಂಡು ಬರುತ್ತಿದ್ದ ವೇಳೆ ದೇವರಕೊಲ್ಲಿ ಹಳೆ ಕೊಕ್ಕೊ ಎಸ್ಟೇಟ್ ಬಳಿ ಸುಮಾರು ಬೆಳಿಗ್ಗೆ 5 ಗಂಟೆಗೆ ಆಕಸ್ಮಿಕವಾಗಿ ಲಾರಿಯ ಹಿಂದಿನ ಚಕ್ರಕ್ಕೆ ದಿಡೀರ್ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಚಾಲಕ ಲಾರಿಯನ್ನು ನಿಲ್ಲಿಸಿ ಇಳಿದು ಲಾರಿಯಲ್ಲಿದ್ದ ನೀರನ್ನು ಹಾಕಿ ಬೆಂಕಿ ನಂದಿಸಿದ್ದಾರೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸ್ಥಳೀಯರು, , ಪೊಲೀಸರು ಆಗಮಿಸಿದ್ದಾರೆ.