ರೋಟರಿ ಕ್ಲಬ್ ಸುಳ್ಯ ಪ್ರಾಯೋಜಿತ -ರೋಟರಿ ಚಾರಿಟೇಬಲ್ ಟ್ರಸ್ಟ್ ನ 2025-27 ನೇ ಸಾಲಿಗೆ ತೆರವಾದ ಟ್ರಸ್ಟಿಗಳ ಆಯ್ಕೆಯು ಜೂ.11ರಂದು ರೋಟರಿ ಸಮುದಾಯ ಭವನ ರೋಟರಿ ಕ್ಲಬ್ ಸುಳ್ಯ ಇದರ ಸಾಮಾನ್ಯ ಸಭೆಯಲ್ಲಿ ನಡೆಯಿತು.















ಟ್ರಸ್ಟಿ ಸ್ಥಾನಕ್ಕೆ ಡಾ. ಪುರುಷೋತ್ತಮ ಕೂಜುಗೋಡು ಕಟ್ಟೆಮನೆ ಇವರ ಹೆಸರನ್ನು ರೋಟರಿ ವಿದ್ಯಾ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ಮೇಜರ್ ಡೋನರ್. ರೊ. ರಾಮಚಂದ್ರ ಪಿ. ಸೂಚಿಸಿ, ರೊ. ಗಣೇಶ್ ಆಳ್ವ ಅನುಮೋದಿಸಿದರು. ರೊ. ಹರಿರಾಯ ಕಾಮತ್ ರವರನ್ನು ಮೇಜರ್ ಡೋನರ್. ಡಾ.ಕೇಶವ ಪಿ. ಕೆ. ಸೂಚಿಸಿ, ರೊ.ಸನತ್ ಪಿ.ರವರು ಅನುಮೋದಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ – ರೊ. ಯೋಗಿತಾ ಗೋಪಿನಾಥ್, ಕಾರ್ಯದರ್ಶಿ ರೊ.ಡಾ. ಹರ್ಷಿತ ಪುರುಷೋತ್ತಮ, ನಿಯೋಜಿತ ಅಧ್ಯಕ್ಷ ರೊ.ರಾಮ ಮೋಹನ್ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ರೊ. ಪ್ರಭಾಕರ ನಾಯರ್ ಹಾಗೂ ರೋಟರಿ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೊ. ಚಂದ್ರಶೇಖರ ಪೆರಾಲ್ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
1980-81 ರಿಂದ ರೋಟರಿ ಕ್ಲಬ್ ಸುಳ್ಳ್ಯ ಪ್ರಾಯೋಜಿತ ರೋಟರಿ ಚಾರಿಟೇಬಲ್ ಟ್ರಸ್ಟಿನ ಅಡಿಯಲ್ಲಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.










