ಕೆವಿಜಿ ಐಪಿಎಸ್‌ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಶರೀರದಲ್ಲಿ ಮತ್ತು ಮನಸ್ಸಿನಲ್ಲಿ ಚೈತನ್ಯ ಉದ್ದೀಪನಗೊಳ್ಳಲು ಯೋಗ ಅತ್ಯಗತ್ಯ : ಚಿದಾನಂದ ಬಾಳಿಲ

ಶೈಕ್ಷಣಿಕ ಪಠ್ಯದಲ್ಲಿ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸಲು ಯೋಗವು ಅತ್ಯಗತ್ಯ : ಅರುಣ್ ಕುಮಾರ್

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಶುಭ ಹಾರೈಸಿದರು.
ದೀಪ ಪ್ರಜ್ವಲಿಸಿ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಬಾಳಿಲ ‘ ಯೋಗವನ್ನು ಗುರುಗಳ ಮುಖಾಂತರ ಅಭ್ಯಾಸ ಮಾಡಿದರೆ ನಮ್ಮ ಶರೀರ ಮತ್ತು ಮನಸ್ಸನ್ನು ಚೈತನ್ಯಗೊಳಿಸಬಹುದು.ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಬಳಿಕ ಮಾತಾಡಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ಇಂದಿನ ಒತ್ತಡಯುಕ್ತವಾದ ಜೀವನದಲ್ಲಿ ಶಾಂತಿ ಕಾಪಾಡಿ, ಆತ್ಮವಿಶ್ವಾಸದಿಂದ ನಮ್ಮ ಸಾಮಾಜಿಕ ಕೌಶಲ್ಯದ ಸುಧಾರಣೆ ಮಾಡಿ ನೆಮ್ಮದಿಯಾಗಿರಲು ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನವನ್ನು ಕೇಂದ್ರೀಕರಿಸಲು ಯೋಗವು ಅತ್ಯಗತ್ಯ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್ (ರಿ) ಮಂಗಳೂರು, ತಪಸ್ವಿ ಸ್ಕೂಲ್ ಆಫ್ ಯೋಗ ಮಂಗಳೂರು ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಷನ್ (ರಿ) ಮಂಗಳೂರು ಇವರು ಆಯೋಜಿಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಿಯಾದ ನಾಲ್ಕನೇ ತರಗತಿಯ ವಿದ್ಯಾರ್ಥಿ ಆಶ್ರಿತ್ ಎ ಸಿ ಮತ್ತು ತೃತೀಯ ಸ್ಥಾನಿಯಾದ ಅದಿತಿ ಯು ಇವರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನಿತ್ತು ಗೌರವಿಸಲಾಯಿತು.

ಬಳಿಕ ಯೋಗ ಗುರುಗಳಾದ ಸಂತೋಷ್ ಮುಂಡಕಜೆ ” ಯೋಗ ಕೇವಲ ಈ ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿದಿನವೂ ಅಭ್ಯಾಸ ಮಾಡ ಬೇಕು” ಎಂದು ಹೇಳುತ್ತಾ ಯೋಗ ಶಿಕ್ಷಕಿ ಶ್ರೀಮತಿ ಪ್ರಶ್ವಿಜ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಆಸನಗಳನ್ನು ಅಭ್ಯಾಸ ಮಾಡಿಸಿದರು.

ಈ ಕಾರ್ಯಕ್ರಮದ ವಿಶೇಷತೆಯನ್ನು ಎಂಟನೇ ತರಗತಿಯ ಮೈಥಿಲಿ ಹೇಳಿದರೆ ಅತಿಥಿಗಳ ಪರಿಚಯವನ್ನು ಲಾಸ್ಯ ವಾಚಿಸಿದರು. ಬೃಂದಾ ಜಿ. ರಾವ್ ಕಾರ್ಯಕ್ರಮವನ್ನು ನಿರೂಪಿಸಿ, ಫಾತಿಮಾ ಝಿಬ ಸ್ವಾಗತಿಸಿ ಫಾತಿಮತ್ ಅಮ್ನ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಉಪ ಪ್ರಾಂಶುಪಾಲೆ ಶ್ರೀಮತಿ ಶಿಲ್ಪ ಬಿದ್ದಪ್ಪ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.