ಮುಗೇರು – ಮಾಣಿಮಜಲು ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಯುವಕ ಮಂಡಲ ಕನಕಮಜಲು ಇದರ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗೇರು, ಮಾಣಿಮಜಲು ಇಲ್ಲಿ 11ನೇ ಅಂತರಾಷ್ಟಿಯ ಯೋಗ ದಿನಾಚರಣೆಯನ್ನು ಜೂ. 21 ರಂದು ಆಚರಿಸಲಾಯಿತು.

ಯೋಗ ಪ್ರತಿಭೆ ಯೋಗೀಶ್ ಸುಣ್ಣಮೂಲೆ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕಿ ಶ್ರಿಮತಿ ರತಿಯವರು ಯೋಗದ ಉಪಯೋಗ ಮತ್ತು ಮಹತ್ವವನ್ನು ತಿಳಿಸಿದರು.
ಚಂದ್ರಶೇಖರ ಕುದ್ಕುಳಿ ಪ್ರಾಸ್ತವಿಕ ಮಾತುಗಳನ್ನಾಡಿದರು
ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಪೂರ್ವಧ್ಯಕ್ಷರುಗಳು, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಶಾಲಾ ಶಿಕ್ಷಕ ವೃಂದ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಸಿಹಿ ತಿಂಡಿ ನೀಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.