ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅರೋಪಿಸಿ ಇಂದು ಅರಂತೋಡು ಗ್ರಾ.ಪಂ. ಮುಂಭಾಗ ಬಿಜೆಪಿ ನಾಯಕರಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಪ್ರಮುಖರಾದ ಶಿವಾನಂದ ಕುಕ್ಕುಂಬಳ, ಸತೀಶ್ ನಾಯ್ಕ್ , ರೋಹಿತ್ ಕಲ್ಲುಗದ್ದೆ, ಭಾರತೀ ಪುರುಷೋತಮ, ಪುಷ್ಪಾ ಮೇದಪ್ಪ, ಚಂದ್ರಶೇಖರ ಆಚಾರ್ಯ, ಕಿಶೋರ್ ಉಳುವಾರ್ ,ಸೋಮಶೇಖರ ಪೈಕ , ದಯಾನಂದ ಕುರುಂಜಿ, ಪಂಚಾಯತ್ ಸದಸ್ಯರು, ಸೊಸೈಟಿ ನಿರ್ದೇಶಕರು, ಬಾಜಪ ಕಾರ್ಯಕರ್ತರು ಹಾಜರಿದ್ದರು.
















ಇಂದು ತಾಲೂಕಿನ 25 ಗ್ರಾಮ ಪಂಚಾಯತ್ ಎದುರು ಹಾಗೂ ನ.ಪಂ.ಮು0ಭಾಗ ಪ್ರತಿಭಟನೆ ನಡೆಯಲಿದೆ. ಗ್ರಾ.ಪಂ. ಹಾಗೂ ನ.ಪಂ.ನ ಕೆಲಸ ಕಾರ್ಯಗಳು ಮಾಮೂಲಿನಂತೆ ನಡೆಯುತ್ತಿದೆ.










