ರಾಜ್ಯ ಸರಕಾರ ಜನ ವಿರೋಧಿಯಾಗಿ ನಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮಂಡೆಕೋಲು ಗ್ರಾ.ಪಂ. ಎದುರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದೆ.















ಪಂಚಾಯತ್ ಎದುರು ಘೋಷಣೆ ಕೂಗಿದ ಬಿಜೆಪಿ ಯವರು ಬಳಿಕ ಗ್ರಾ.ಪಂ. ಪಿಡಿಒ ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಬಿಜೆಪಿ ಪ್ರಮುಖರಾದ ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೆಟ್ಟಿ, ಬಾಲಚಂದ್ರ ದೇವರಗುಂಡ, ಸುರೇಶ್ ಕಣೆಮರಡ್ಕ, ಕೇಶವಮೂರ್ತಿ ಹೆಬ್ಬಾರ್, ರಾಮಕೃಷ್ಣ ರೈ ಪೇರಾಲುಗುತ್ತು, ವಿನುತಾ ಪಾತಿಕಲ್ಲು, ಲಕ್ಷ್ಮಣ ಉಗ್ರಾಣಿಮನೆ, ದಿವ್ಯಲತಾ ಚೌಟಾಜೆ, ಪುರುಷೋತ್ತಮ ಕಾಡುಸೊರಂಜ, ಮೋಹಿನಿ ಚಂದ್ರಶೇಖರ, ಕುಶಲ ಉದ್ದಂತಡ್ಕ, ಸುಂದರ ಗೌಡ ಕಾಡುಸೊರಂಜ, ಡಿ.ವಿ. ಸುರೇಶ್, ಆಶಿಕ್ ದೇವರಗುಂಡ, ರಾಧಿಕ ಮೈತಡ್ಕ, ಶಶಿಕಲಾ, ಶಂಕರ ಪೆರಾಜೆ, ದೀಪಕ್ ದೇವರಗುಂಡ, ಸುನಿಲ್ ಪಾತಿಕಲ್ಲು, ಮಮತಾ ಬೊಳುಗಲ್ಲು ಸಹಿತ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು, ಸೊಸೈಟಿ ನಿರ್ದೇಶಕರು ಮೊದಲಾದವರಿದ್ದರು.











