ಸಂಪಾಜೆಯಲ್ಲಿ AIKMCC ಪಾಲಿಯೇಟಿವ್ ಹೋಮ್ ಕೇರ್ ಆರಂಭ

0

AIKMCC ಸುಳ್ಯ., ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿ ಬೆಂಗಳೂರು, AIKMCC ಕೊಡಗು ಇದರ ಸಹಬಾಗಿತ್ವದಲ್ಲಿ ಸಂಪಾಜೆ ಪರಿಸರದಲ್ಲಿ ಪಾಲಿಯೇಟಿವ್ ಹೋಮ್ ಕೇರ್ ತಂಡವು ಸೇವೆ ನಡೆಸಲಾಯಿತು.


ಜೂ.25ರಂದು ಸಂಪಾಜೆ ಹಾಗೂ ಕೊಡಗು ಸಂಪಾಜೆಯ ಸುಮಾರು 10ಕ್ಕೂ ಅಧಿಕ ನಿತ್ಯರೋಗಿಗಳನ್ನು ಅವರವರ ಮನೆಗಳಿಗೆ ತೆರಳಿ ಭೇಟಿಮಾಡಿ ಅವರನ್ನು ಪರೀಕ್ಷಿಸಿ ಅವಶ್ಯಕತೆ ಇರುವಲ್ಲಿ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು.


ಪ್ರತಿ ರೋಗಿಗಳ ರಕ್ತದೊತ್ತಡ, ಶುಗರ್ ಪರೀಕ್ಷಿಸಿ ವಿವರ ನೀಡಿದರು.
ವಾರಕ್ಕೊಮ್ಮೆ ಆ ರೋಗಿಗಳನ್ನು ನಿರಂತರವಾಗಿ ಪರೀಕ್ಷಿಸಲಾಗುವುದು ಎಂದು ಸುಳ್ಯ AIKMCC ಪ್ರದಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ತಿಳಿಸಿದರು.
ಬಡ, ಅಶಕ್ತ ರೋಗಿಗಳ ಮಾಹಿತಿ ನೀಡುವಂತೆಯೂ ಅವರು ಕೇಳಿಕ್ಕೊಂಡರು.


ಶುಶ್ರೂಷಕಿ ಸುಜಾತಾ,ಜೇರಿನ್ ಬಶೀರ್,ದ,ಕ,ಜಿಲ್ಲಾ AIKMCC ಪ್ರಧಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಗಳ್ ಜಬ್ಬಾರ್ ಕಲ್ಲೆಗ,ಶಾಹೀರ್ ಕೊಡ್ಲಿಪೇಟೆ,ರಾಯಿಜ್ ಕಬಕ ರಫೀಕ್ ಪ್ರಗತಿ,ತಾಜ್ ಮಹಮ್ಮದ್,ಅಬ್ಬಾಸ್ ಸಂಪಾಜೆ ಉಪಸ್ಥಿತರಿದ್ದರು