ಕುಸಿಯುತ್ತಿರುವ ರಸ್ತೆ ಸರಿಪಡಿಸಿ

0

ನ.ಪಂ.ಗೆ ಕುರುಂಜಿ, ಭಸ್ಮಡ್ಕ, ಕುಂತಿನಡ್ಕ ನಿವಾಸಿಗಳ ಮನವಿ

ಕುಸಿಯುತ್ತಿರುವ ರಸ್ತೆ ಹಾಗೂ ತೀರಾ ಹದಗೆಟ್ಟ ರಸ್ತೆಯನ್ನು ಸರಿಪಡಿಸಲು ಸುಳ್ಯ ನಗರದ ಕುರುಂಜಿ, ಕುಂತಿನಡ್ಕ, ಭಸ್ಮಡ್ಕ, ದೇವರಕಳಿಯ ಭಾಗದ ನಿವಾಸಿಗಳು ನ.ಪಂ.ಗೆ ಮನವಿ ಸಲ್ಲಿಸಿದ್ದಾರೆ.

ಭಸ್ಮಡ್ಕ‌ ಮತ್ತಿತರ ಕಡೆಗಳಿಗೆ ಮುಖ್ಯ ರಸ್ತೆಯಾಗಿರುವ ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಹಿಂಬದಿಯಿರುವ ಭಸ್ಮಡ್ಕದ ವರೆಗೆ ಸಂಚರಿಸಲು ಇರುವ ರಸ್ತೆ ಕೆಲವು ಕಡೆ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಮುಖ್ಯವಾಗಿ ಪಾಲಿಟೆಕ್ನಿಕ್ ಕಾಲೇಜು ಹಿಂಬದಿಯಿಂದ 200 ಮೀಟರ್ ‌ರಸ್ತೆ ಹದಗೆಟ್ಟಿದೆ. ಹಾಗೂ ಕುರುಂಜಿ ದೈವಸ್ಥಾನದ ಹಿಂಬದಿ ರಸ್ತೆ ಕುಸಿದಿದ್ದು ಸಂಚರಿಸಲು ಭಯವಾಗುತ್ತಿದೆ. ಆದ್ದರಿಂದ ‌ತಾವುಗಳು ನಮ್ಮ ರಸ್ತೆಯನ್ನು ಬಂದು ಪರಿಶೀಲಿಸಿ, ತುರ್ತಾಗಿ ಸರಿಪಡಿಸಿ, ಸಂಚಾರ ಯೋಗ್ಯವನ್ನಾಗಿಸಬೇಕು ನ.ಪಂ.ಗೆ ಮನವಿ‌ ಮಾಡಿದ್ದಾರೆ.

ಊರವರು ಮನವಿಗೆ ಸಹಿ ಹಾಕಿದ್ದು, ಹೇಮಪ್ರಕಾಶ್ ಕುಂತಿನಡ್ಕ ಹಾಗೂ ದಿನೇಶ್ ಭಸ್ಮಡ್ಕ ನ.ಪಂ. ಮುಖ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.