ದುಗ್ಗಲಡ್ಕ; ಕೊಯಿಕುಳಿಯಲ್ಲಿ ರಸ್ತೆಗೆ ಮರ ಬಿದ್ದು ಬ್ಲಾಕ್- ತೆರವು

0

ದುಗ್ಗಲಡ್ಕ ಸಮೀಪದ ಕೊಯಿಕುಳಿ ಎಂಬಲ್ಲಿ ಮುಖ್ಯರಸ್ತೆಗೆ ಮರ ಬಿದ್ದು, ರಸ್ತೆ ಬ್ಲಾಕ್ ಆಗಿ ಬಳಿಕ ಸ್ಥಳೀಯರು ತೆರವುಗೊಳಿಸಿದ್ದಾರೆ.

ಇಂದು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಮರ ಬಿದ್ದಿದ್ದು,ರಸ್ತೆ ಬ್ಲಾಕ್ ಆಯಿತು.ವಾಹನಗಳು ಸಾಲು ಗಟ್ಟಿ ನಿಂತವು. ಸ್ಥಳೀಯರು ಮರ ಕತ್ತರಿಸುವ ಯಂತ್ರ ಬಳಸಿ ತೆರವು ಕಾರ್ಯ ನಡೆಸಿದರು.
ಹಲವು ಅಪಾಯಕಾರಿ ಮರಗಳು
ಈ ಮರ ಬಿದ್ದ ಕೊಯಿಕುಳಿ- ಗೋಂಟಡ್ಕ ರಸ್ತೆ ಬದಿಯಲ್ಲಿ ಇನ್ನೂ ಹಲವಾರು ಅಪಾಯಕಾರಿ ಮರಗಳಿವೆ. ರಸ್ತೆಯ ಮೇಲ್ಬದಿಯಿಂದ ಗುಡ್ಡ ಕುಸಿಯುವ ಬೀತಿಯೂ ಇದ್ದು, ಮರ ಕೂಡ ಬೀಳುವ ಹಂತದಲ್ಲಿದೆ. ಆದ್ದರಿಂದ ಈ ಮರಗಳನ್ನು ತೆರವು ಮಾಡಬೇಕಾಗಿದೆ.