ಮಡಿಕೇರಿ ಪೊಲೀಸರಿಂದ ಸುಳ್ಯ ಭಾಗದಲ್ಲಿ ಖದೀಮರಿಗಾಗಿ ಹುಡುಕಾಟ
ಸುಳ್ಯದ ನಾನಾ ಕಡೆಗಳಲ್ಲಿ ಸಿ ಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ
ಮಡಿಕೇರಿ ನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ಕಳೆದ ಒಂದು ವಾರದ ಹಿಂದೆ ಕಳ್ಳರು ರಾತ್ರಿ ವೇಳೆ ಸುಮಾರು 8 ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ನಗದು ಹಾಗೂ ಕೆಲವು ಮನೆಗಳಿಂದ ಸಣ್ಣ ಪುಟ್ಟ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಪೊಲೀಸ್ ಕ್ವಾಟರ್ಸ್ನಲ್ಲಿ ಸುಮಾರು 80 ಕ್ಕೂ ಹೆಚ್ಚು ಮನೆಗಳು ಇದ್ದು ಇದರಲ್ಲಿ 8 ಮನೆಗಳ ಸದಸ್ಯರು ಬೇರೆ ಬೇರೆ ಕಡೆ ಹೋಗಿದ್ದ ಸಮಯ ರಾತ್ರಿ ಹೊತ್ತು ಕಳ್ಳ ರು ಮನೆಗಳಿಗೆ ನುಗ್ಗಿ ಕಳ್ಳತನ ನಡೆಸಿ ಪರಾರಿ ಯಾಗಿದ್ದರು.















ಖದೀಮರು ಕೆಲವು ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಹಾಗೂ ನಗದು ದೋಚಿದ್ದರು.
ಸದ್ಯ ಕಳ್ಳರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವ ಮಡಿಕೇರಿ ಪೊಲೀಸರು ಮಡಿಕೇರಿ ರೂರಲ್ ಠಾಣೆ ಯ ವೃತ್ತ ನಿರೀಕ್ಷಕರಾದ ಚಂದ್ರ ಶೇಖರ್ ರವರ ನೇತೃತ್ವದ ತಂಡ ಸುಳ್ಯ ಮತ್ತು ಸಂಪಾಜೆ ಭಾಗದಲ್ಲಿ ಕಳ್ಳರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಈ ಕಾರ್ಯಚರಣೆಯ ಅಂಗವಾಗಿ ಸುಳ್ಯ ನಗರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಡಿಕೇರಿ ಪೊಲೀಸರು ಸುಳ್ಯದ ಹಳೆಗೇಟು, ಗಾಂಧಿನಗರ, ಬಸ್ಸು ನಿಲ್ದಾಣ ಬಳಿ, ಕುರುಂಜಿ ಭಾಗ್ ಮುಂತಾದ ಕಡೆಗಳಲ್ಲಿ ಸಿ ಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಸಂಪಾಜೆ, ಸುಳ್ಯ ಭಾಗಕ್ಕೆ ಕಳ್ಳರು ಪರಾರಿಯಾಗಿರುವ ಶಂಕೆ ಇದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಈ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.









