ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಚುನಾವಣೆ

0

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025-2026 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಚುನಾವಣೆ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಿತು.ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಹಿರಿಯ‌ ಶಿಕ್ಷಕಿ ಚಂದ್ರಕಲಾ.ಡಿ ,ಚುನಾವಣಾಧಿಕಾರಿಗಳಾದ ಶ್ರೀಮತಿ ಜಯಶ್ರೀ. ಕೆ, ಶ್ರೀಮತಿ ಸಂಜೀವಿ.ಪಿ.ಆರ್ , ಕಳೆದ ಶೈಕ್ಷಣಿಕ ಸಾಲಿನ ಉಪನಾಯಕ ಸಂಭ್ರಮ್.ಕೆ.ಎಸ್, ನಾಯಕ ಅಭ್ಯರ್ಥಿಗಳಾದ ಅನನ್ಯ.ಕೆ.ಆರ್ ಮತ್ತು ಗಗನ್ ಪಿ.ಎ , ಉಪನಾಯಕ ಅಭ್ಯರ್ಥಿಗಳಾದ ಅನುಷ್ಕಾಕೆ.ಆರ್ ಮತ್ತು ಸಾನ್ವಿ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧಿಕ ಮತಗಳನ್ನು ಗಳಿಸಿ ಅನನ್ಯ .ಕೆ.ಎ‌ ನಾಯಕಿಯಾಗಿ ಆಯ್ಕೆಯಾದರೆ, ಅನುಷ್ಕಾಕೆ.ಆರ್ ಉಪನಾಯಕಿಯಾಗಿ ಆಯ್ಕೆಯಾದರು.ಶ್ರೀಮತಿ ಜಯಶ್ರೀ .ಕೆ ಸ್ವಾಗತಿಸಿ, ಶ್ರೀಮತಿ ಸಂಜೀವಿ ಪಿ.ಆರ್ ವಂದಿಸಿದರು . ಅಪೂರ್ವ ಮತ್ತು ಮೇಘನಾ.ಎಮ್.ಆರ್ ಪ್ರಾರ್ಥಿಸಿದರು.ರಮ್ಯಾ.ಅಡ್ಕಾರು ನಿರೂಪಿಸಿದರು.