














ಸುಳ್ಯ ತಾಲೂಕುಬೋರ್ಡ್ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪರಿಷತ್ ಸದಸ್ಯ. ಎಣ್ಮೂರು ಮಸೀದಿಯ ಗೌರವಾಧ್ಯಕ್ಷರಾಗಿರುವ ನ್ಯಾಯವಾದಿ ಹಾಗೂ ನೋಟರಿ ಐ. ಕುಂಞಿಪಳ್ಳಿಯವರು ಇದೀಗ ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಇತಿಹಾಸ ಪ್ರಸಿದ್ದ ಐವತ್ತೊಕ್ಲು ಪಟೇಲ್ ಮನೆಯವರಾದ ಕುಂಞಿಪಳ್ಳಿಯವರು ವಯೋಸಹಜ ಅಸೌಖ್ಯದಿಂದಿದ್ದು, ಪೈಚಾರಿನಲ್ಲಿರುವ ತಮ್ಮ ಮನೆಯಲ್ಲಿ ಬೆಳಿಗ್ಗೆ ೧೦.೩೦ರ ಸುಮಾರಿಗೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಅಂತ್ಯ ಸಂಸ್ಕಾರಕ್ಕೆ ಅವರ ಪಾರ್ಥಿವ ಶರೀರವನ್ನು ಐವತ್ತೊಕ್ಲು ಗ್ರಾಮದ ಅವರ ಐವತ್ತೊಕ್ಲು ಮನೆಗೆ ಕೊಂಡೊಯ್ಯಲಾಗುವುದೆಂದು ತಿಳಿದು ಬಂದಿದೆ.










