















ಲಕ್ಷ್ಮಿ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯತ್ ಬೆಳ್ಳಾರೆ ಇವರ ಆಶ್ರಯದಲ್ಲಿ ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಯೋಗ ದಿನಾಚರಣೆ, ಲಿಂಗತ್ವ, ಆರೋಗ್ಯ ಮಾಹಿತಿ ಕಾರ್ಯಕ್ರಮ ಜೂ.20 ರಂದು ನಡೆಯಿತು.
ಬೆಳ್ಳಾರೆ ಸಮುದಾಯ ಆರೋಗ್ಯಾಧಿಕಾರಿಯಾದ ಕು.ಹವ್ಯಶ್ರೀ ಇವರು ಕಿಶೋರಿಯರಿಗೆ “ಋತುಚಕ್ರ”ದ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮೇಲ್ವಿಚಾರಕರಾದ ಶ್ರೀಮತಿ ಉಷಾ ಪ್ರಸಾದ್ ಇವರು ಲಿಂಗತ್ವ ದ ಬಗ್ಗೆ ಮಾಹಿತಿ ನೀಡಿದರು. ಎಂ.ಬಿ.ಕೆ ಗೀತಾಪ್ರೇಮ್ ಘನತ್ಯಾಜ್ಯ ಘಟಕದಲ್ಲಿ ಕಸ ವಿಂಗಡಣೆಯ ಬಗ್ಗೆ ಮಾಹಿತಿ ನೀಡಿದರು. ಎಲ್.ಸಿ.ಆರ್.ಪಿ.ದಿವ್ಯಲತಾ ಇವರು ಲಿಂಗತ್ವ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಇಂದಿರಾ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಎಲ್ಲರನ್ನು ಸ್ವಾಗತಿಸಿ, ಎಂಬಿಕೆ ಗೀತಾಪ್ರೇಮ್ ವಂದಿಸಿದರು. ಅಂಗನವಾಡಿ ಸಹಾಯಕಿ ಗುಲಾಬಿ ಸಹಕರಿಸಿದರು.










