ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಪೂರ್ವಾಹ್ನ 11 ರಿಂದ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಮಂಡೆಕೋಲು ಗ್ರಾಮದ ಪೇರಾಲಿನ ಜೆಡಿಎಸ್ ಮುಖಂಡ, ಲ. ವಿಶ್ವನಾಥ ಗೌಡ ನೀರ್ಪಾಡಿಯವರು ಅಲ್ಪಕಾಲದ ಅಸೌಖ್ಯದಿಂದ ಜೂ. 28ರಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 69 ವರ್ಷ ವಯಸ್ಸಾಗಿತ್ತು.















ಜೆಡಿಎಸ್ ಪಕ್ಷದಲ್ಲಿ ಮುಖಂಡರಾಗಿದ್ದ ಅವರು ಸುಳ್ಯ ಲಯನ್ಸ್ ಕ್ಲಬ್ ನಲ್ಲಿಯೂ ಸಕ್ರಿಯ ರಾಗಿದ್ದರು. ಜಾಲ್ಸೂರು, ಮಂಡೆಕೋಲು, ಅಜ್ಜವಾರ ಭಾಗಗಳಲ್ಲಿ ಬೇಬಿ ಅಣ್ಣ ಎಂದೇ ಪ್ರಸಿದ್ಧರಾಗಿದ್ದರು.
ಮೃತರು ಪತ್ನಿ, ಸುಳ್ಯ ಲಯನೆಸ್ ಕ್ಲಬ್ ಮಾಜಿ ಅಧ್ಯಕ್ಷೆ, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಪುಷ್ಪಾವತಿ, ಪುತ್ರ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ಯಾಗಿರುವ ವಿಪಿನ್ ನೀರ್ಪಾಡಿ
ನ್ಯಾಯವಾದಿ ವಿಪುಲ್ ನೀರ್ಪಾಡಿ, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.
ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ವಿಶ್ವನಾಥ ಗೌಡರ ಅಂತಿಮ ದರ್ಶನಕ್ಕೆ ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಪಾರ್ಥಿವ ಶರೀರವನ್ನು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.










