ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಿಂದ ಫುಟ್ಬಾಲ್ ಸ್ಪರ್ಧೆಯಲ್ಲಿ ಮೂರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0


ಸಿ ಐ ಎಸ್ ಸಿ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ 2025-26ರ ಮೊದಲ ಹಂತದ ದಕ್ಷಿಣ ಕನ್ನಡ ಹಾಗೂ ಉಡುಪಿ ಅಂತರ್ ಜಿಲ್ಲಾ ಮಟ್ಟದ ಫುಟ್ಬಾಲ್ ಸ್ಪರ್ಧೆಯು ದಿನಾಂಕ 27- 06- 2025 ರಂದು ಗ್ರೀನ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್ ಬೈಂದೂರು, ಉಡುಪಿಯಲ್ಲಿ ಆಯೋಜಿಸಿದ್ದು ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದು ಹುಡುಗರ ವಿಭಾಗದ 17ರ ವಯೋಮಿತಿಯ ಫುಟ್ಬಾಲ್ ಸ್ಪರ್ಧೆಯಲ್ಲಿ ಶಾಲೆಯು ತೃತೀಯ ಸ್ಥಾನವನ್ನು ಪಡೆದಿದ್ದು ಇದರಲ್ಲಿ ನಮ್ಮ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಅಬ್ದುಲ್ಲಾಹಿ ನದೀಂ ಪಿ ಎ, ಸಂಪ್ರೀತ್ ಹೆಚ್ ವೈ, ಸನ್ವಾಸ್ ಕುಂಭಕೋಡ್ ಈ ಮೂರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.