ಆಲೆಟ್ಟಿ (ನಾರ್ಕೋಡು) ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಪೂರ್ವ ಭಾವಿ ಸಭೆ- ಆಮಂತ್ರಣ ಪತ್ರ ಬಿಡುಗಡೆ

0

ಆಲೆಟ್ಟಿ (ನಾರ್ಕೋಡು) ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಪೂರ್ವ ಭಾವಿ ಸಭೆ ಹಾಗೂ ಜು.13 ರಂದು ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಕಂಪ್ಯೂಟರ್ ತರಗತಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆಯು ಜೂ.28 ರಂದು ಶಾಲೆಯ ರಂಗಮಂದಿರದಲ್ಲಿ ನೆರವೇರಿತು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ .ಜಿ ಯವರು ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣದ ನೀಲ ನಕಾಶೆಯನ್ನು ಬಿಡುಗಡೆ ಮಾಡಲಾಯಿತು.
ಶತಮಾನೋತ್ಸವ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಹಾಗೂ ಆರ್ಥಿಕ ಕ್ರೋಢಿಕರಣದ ಕುರಿತು ವಿಚಾರ ವಿಮರ್ಶೆ ನಡೆಸಲಾಯಿತು.
ಆಮಂತ್ರಣ ಪತ್ರ ಹಂಚಿಕೆಯ ಕುರಿತು ಸದಸ್ಯರಿಗೆ ಜವಬ್ದಾರಿ ಹಂಚಿಕೆ ಮಾಡಲಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ಮಾಹಿತಿ ಸಂಗ್ರಹಿಸುವ ಬಗ್ಗೆ ಮುತುವರ್ಜಿ ವಹಿಸಿಕೊಳ್ಳುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶತಮಾನೋತ್ಸವ ಆರ್ಥಿಕ ಸಮಿತಿ ಸಂಚಾಲಕ ಜಯಪ್ರಕಾಶ್ ಕುಂಚಡ್ಕ, ಉಪಾಧ್ಯಕ್ಷರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು,ರತ್ನಾಕರ ಗೌಡ ಕುಡೆಕಲ್ಲು, ಕೃಪಾಶಂಕರ ತುದಿಯಡ್ಕ,
ಪ್ರಧಾನ ಕಾರ್ಯದರ್ಶಿ ಗಿರೀಶ್ ನಾರ್ಕೋಡು, ಕೋಶಾಧಿಕಾರಿ ರಾಮಚಂದ್ರ ಆಲೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು, ಕಾರ್ಯದರ್ಶಿ ದುರ್ಗಾಪ್ರಸಾದ್ ಕುಡೆಕಲ್ಲು,ಕೋಶಾಧಿಕಾರಿ ಸಂತೋಷ್ಕಲ್ಲೆಂಬಿ,
ಹಿರಿಯರಾದ ಅಚ್ಚುತ ಮಾಸ್ತರ್ ನಾರ್ಕೋಡು,
ವೆಂಕಪ್ಪ ಮಾಸ್ತರ್ ಕುಂಚಡ್ಕ, ದೇವಯ್ಯ ಗೌಡಮೊರಂಗಲ್ಲು,
ಯತಿರಾಜ್ ಭೂತಕಲ್ಲು, ಕುಸುಮಾಧರ ಭೂತಕಲ್ಲು,ಆನಂದ ಅಡ್ಪಂಗಾಯ,ಸತೀಶ್ಚಂದ್ರ ಕಲ್ಲೆಂಬಿ, ನವೀನ್ ಕುಮಾರ್ ಕುಂಚಡ್ಕ, ದಿವಾಕರ ಭೂತಕಲ್ಲು, ವಸಂತ ಬಾಳೆಹಿತ್ಲು, ಸೀತಾರಾಮ ಮೊರಂಗಲ್ಲು, ಹಿಮಕರ ಚಳ್ಳಂಗಾರು, ರಾಕೇಶ್ ಕುಡೆಕಲ್ಲು, ಚೇತನ್ ಗುಡ್ಡೆಮನೆ, ಸೋಮನಾಥ ನಡುಮನೆ, ಮದನ್ ಕೃಷ್ಣ ಮೊರಂಗಲ್ಲು, ಪ್ರಕಾಶ್ ನಾರ್ಕೋಡು, ಕೇಶವ ಮೊರಂಗಲ್ಲು, ಶಿವಪ್ರಸಾದ್ ಆಲೆಟ್ಟಿ ಹಾಗೂ ಶಾಲಾ ಅದ್ಯಾಪಕ ವೃಂದದವರು,ಎಸ್.ಡಿ.ಎಂ.ಸಿ.ಸದಸ್ಯರು, ಮಹಿಳೆಯರು,ಭೋದಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕ ಚಂದ್ರಕಾಂತ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು.