ಕೊಡಗು ಸಂಪಾಜೆ ಶಿರಾಡಿ ರಾಜನ್ ದೈವಸ್ಥಾನದ ಆವರಣ ಗೋಡೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಸಕ ಎ.ಎಸ್ ಪೊನ್ನಣ್ಣನವರಿಗೆ ಮನವಿ

0

ಕೊಡಗು ಸಂಪಾಜೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಆಗುತ್ತಿದ್ದು, ದೈವಸ್ಥಾನದ
ಆವರಣ ಗೋಡೆ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡುವಂತೆ ವಿರಾಜಪೇಟೆ ವಿಧಾನಸಭಾ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ ರವರಿಗೆ ಜೂನ್.28 ರಂದು ಮನವಿ ಸಲ್ಲಿಸಲಾಯಿತು.

ಈ ಸಂದಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಿ .ಎಲ್, ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಕೇಶವ ಚೌಟಜೆ, ಉಪಾಧ್ಯಕ್ಷರಾದ ವಿಜಯ್ ಕುಮಾರ್ ಕನ್ಯಾನ, ಕಾರ್ಯದರ್ಶಿ ನಾರಾಯಣ ಕುಕ್ಕೇಟಿ , ಕೋಶಾಧಿಕಾರಿ ಸೃಜನ್ ಸುಳ್ಳ ಕೋಡಿ, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ಮಾಧವ ಕನ್ಯಾನ , ದೈವದ ಪೂಜಾ ಕರ್ಮಿ ಪ್ರಕಾಶ್ ಕಟ್ಟಕೋಡಿ , ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹೊನ್ನಪ್ಪ ಕಾಸ್ಪಾಡಿ , ಕಿಶೋರ್ ಕುಮಾರ್ ಹಂಡನ ಮನೆ, ಲಿಂಗಪ್ಪ ಕುಕ್ಕೇಟಿ , ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ , ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಿ .ಎಲ್, ರಿತಿನ್ ಡೆಮ್ಮಲೆ , ಗಣಪಯ್ಯ ಚೌಟಾಜೆ , ಹೊನ್ನಪ್ಪ ಪಡ್ಪು ಮೊದಲಾದವರು ಉಪಸ್ಥಿತರಿದ್ದರು.