ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಮಹಾಸಭೆ

0

ಆಡಳಿತ ಮಂಡಳಿ ಪದಾಧಿಕಾರಿಗಳ ಪುನರಾಯ್ಕೆ

ಎಸ್.ಎಸ್.ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ, ಆಡಳಿತ ಮಂಡಳಿಯ ಪದಾಧಿಕಾರಿಗಳ ಪುನರಾಯ್ಕೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ಜೂ.29ರಂದು ನಡೆಯಿತು.

ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು ಅವರು ಗತ ಮಹಾಸಭೆಯ ವರದಿ , ಆಡಳಿತ ಸಮಿತಿ ವರದಿ , ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ ರಾಜಗೋಪುರ ವದಂತಿ ಬಗ್ಗೆ ಲೆಕ್ಕಪತ್ರ ಮಂಡಿಸಿದರು.

ಸಭೆಯಲ್ಲಿ ರಾಜಗೋಪುರ ವಂತಿಗೆ ಬಾಕಿ0ಪಚ್ಚಲು ವಂತಿಗೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪೆರಾಜೆ ಗ್ರಾಮದ ವಿದ್ಯಾರ್ಥಿಗಳಾದ ಹೃತಿಕಾ ಬಂಗಾರಕೋಡಿ , ಪೂರ್ವಿಕಾ ಎನ್. ಜೆ , ಭೂಮಿಕಾ ಎಂ. ಹೆಚ್ , ವೃಷಾಂಕ್ ಎನ್. ಎ ,
ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಭೆಯಲ್ಲಿ ಆಡಳಿತ ಮಂಡಳಿಯನ್ನು ಪುನರಾಯ್ಕೆ ಮಾಡಲಾಯಿತು. ಮೊಕ್ತೇಸರರಾಗಿ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿಯಾಗಿ ತೇಜಪ್ರಸಾದ್ ಅಮೆಚೂರು, ಸಹ ಕಾರ್ಯದರ್ಶಿಯಾಗಿ ಚಿನ್ನಪ್ಪ ಅಡ್ಕ ಸೇರಿದಂತೆ ಹಾಲಿ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಪುನರಾಯ್ಕೆ ಮಾಡಲಾಯಿತು.

ದೇವಸ್ಥಾನದ ದೇವತಕ್ಕ ರಾಜಗೋಪಾಲ ರಾಮಕಜೆ, ತಕ್ಕ ಮುಖ್ಯಸ್ಥರುಗಳಾದ ಪುರುಷೋತ್ತಮ ನಿಡ್ಯಮಲೆ, ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಕೆ.ಪಿ. ಗಣಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ತಕ್ಕ ಮುಖ್ಯಸ್ಥರು , ಆಡಳಿತ ಸಮಿತಿಯ ಸದಸ್ಯರುಗಳು ಸೇರಿದಂತೆ ದೇವಾಲಯದ ಸಿಬ್ಬಂದಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ದೇವಸ್ಥಾನದ ಸಹಕಾರ್ಯದರ್ಶಿ ಸೀತಾರಾಮ ಕದಿಕಡ್ಕ ಪ್ರಾರ್ಥಿಸಿ, ಆಡಳಿತ ಕಾರ್ಯದರ್ಶಿ ತೇಜ ಪ್ರಸಾದ್ ಸರ್ವರನ್ನು ಸ್ವಾಗತಿಸಿ ವಂದಿಸಿದರು.