














ಕಾಡುಪ್ರಾಣಿಗಳಾದ ಆನೆ, ಕಾಡುಕೋಣ, ಕಡವೆ, ಕಾಡು ಹಂದಿ, ಮುಳ್ಳು ಹಂದಿ ಇವುಗಳಿಂದ ಕಾಡಂಚಿನ ಕೃಷಿಕರಿಗೆ ಅಪಾರ ನಷ್ಟಗಳುಂಟಾಗಿದ್ದು ಇವುಗಳಿಂದ ಕೃಷಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಚರ್ಚಿಸಲು ಸಮಾಲೋಚನಾ ಸಭೆ ಜು.3ರಂದು ಬೆಳಗ್ಗೆ11 ಗಂಟೆಗೆ ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಕೃಷಿಕರು ಭಾಗವಹಿಸಬಹುದು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ ಹಾಗೂ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.










