ಅಲೆಟ್ಟಿ ಗ್ರಾಮ ಬಡ್ಡಡ್ಕಕೆ ಸರಕಾರಿ ಬಸ್ ಸಂಚಾರ ಆರಂಭಿಸುವಂತೆ ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಸಚಿವರಿಗೆ ಮನವಿ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಕರ್ನಾಟಕ ಘನ ಸರಕಾರದ ಸಾರಿಗೆ ಮತ್ತು ಮುಜರಾಯಿ ಇಲಾಖೆಗಳ ಸಚಿವರಾದ ರಾಮಲಿಂಗ ರೆಡ್ಡಿಯವರಿಗೆ ಆಲೆಟ್ಟಿ ಗ್ರಾಮದ ಬಡ್ಡಡ್ಕ ಭಾಗಕ್ಕೆ ಸರ್ಕಾರಿ ಬಸ್ಸು ಆರಂಭಿಸುವಂತೆ ಮತ್ತು ಕೇರಳ ರಾಜ್ಯದ ಕಣ್ಣೂರಿಗೆ ಬಸ್ ಸಂಚಾರ ಆರಂಭಿಸುವಂತೆ ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ, ಕಾಂಗ್ರೆಸ್ ನಾಯಕರಾದ ಎಂ ವೆಂಕಪ್ಪ ಗೌಡ, ಪಿ ಎಸ್ ಗಂಗಾಧರ, ಮುಖಂಡರುಗಳಾದ ಸದಾನಂದ ಮಾವಜಿ, ರಾಧಾಕೃಷ್ಣ ಪರಿವಾರಕಾನ, ಭವಾನಿಶಂಕರ ಕಲ್ಮಡ್ಕ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಚೇತನ್ ಕಜೆಗದ್ದೆ, ಎಂ ಜೆ ಶಶಿಧರ ಮಾಸ್ಟರ್ ಸುಳ್ಯ,ಸುರೇಶ್ ಅಮೈ, ಶಿವರಾಮ ಗೌಡ ಅಮೈ, ಜತ್ತಪ್ಪ ಗೌಡ ಉಬರಡ್ಕ,ಸುಳ್ಯ ತಾಲೂಕು ಪಂಚಾಯತ್ ಕೆ ಡಿ ಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಉಪಸ್ಥಿತರಿದ್ದರು.