ವರ್ಗಾವಣೆ ಆದೇಶ ರದ್ದು

0

ಸುಳ್ಯ ಎಸಿಎಫ್ ಆಗಿ ಪ್ರವೀಣ್ ಕುಮಾರ್ ಶೆಟ್ಟಿ‌ ಮುಂದುವರಿಕೆ

ಸುಳ್ಯ‌ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿಯವರ ವರ್ಗಾವಣೆ ಆದೇಶವನ್ನು ಸರಕಾರ ರದ್ದು ಪಡಿಸಿ, ಸುಳ್ಯದಲ್ಲೇ‌ ಮುಂದುವರಿಯುವಂತೆ ಆದೇಶ ಮಾಡಿದೆ.

ಆಡಳಿತಾತ್ಮಕ ದೃಷ್ಟಿಯಿಂದ ಈ ಹಿಂದೆ ಹೊರಡಿಸಲಾದ ಆದೇಶವನ್ನು ರದ್ದು ಪಡಿಸಲಾಗಿದ್ದು, ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಪ್ರಶಾಂತ್ ಕುಮಾರ್ ಪೈಯವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದುವರೆಯುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಜೂ.19ರಂದು ಮಂಗಳೂರು ಸಾಮಾಜಿಕ ಅರಣ್ಯ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈಯವರನ್ನು‌ ಸುಳ್ಯಕ್ಕೆ ಹಾಗೂ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಮಂಗಳೂರು ಸಾಮಾಜಿಕ ಅರಣ್ಯ ವಲಯಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಮಾಡಿತ್ತು.

ಈ ಆದೇಶದ ಪ್ರಕಾರ ಜೂ.23ರಂದು ಪ್ರಶಾಂತ್ ಕುಮಾರ್ ಪೈಯವರು ಸುಳ್ಯಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದರು. ಇದೀಗ ಸರಕಾರ ಈ ಹಿಂದೆ ಹೊರಡಿಸಿದ ಆದೇಶವನ್ನು ಜೂ.30ರಂದು ರದ್ದು ಪಡಿಸಿರುವುದರಿಂದ ಜು.1ರಂದು‌ ಬೆಳಗ್ಗೆ ಪ್ರವೀಣ್ ಕುಮಾರ್ ಶೆಟ್ಟಿ ಯವರು ಮತ್ತೆ ಸುಳ್ಯ ಎಸಿಎಫ್ ಆಗಿ ಕರ್ತವ್ಯ ವಹಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.