ವ್ಯಾಜ್ಯ ಪೂರ್ವ ಮತ್ತು ರಾಜಿ ಮಾಡಿಕೊಳ್ಳಲು ಬರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಕೊಳ್ಳಲು ಅವಕಾಶ
ರಾಷ್ಟೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಮೇರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜು 12 ರಂದು ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲು ಸೂಚನೆ ನೀಡಿರುವ ಹಿನ್ನೆಲೆ ಯಲ್ಲಿ ಜು 12 ರಂದು ಸುಳ್ಯ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಯಲಿದೆ.















ಸುಳ್ಯದ ಹಿರಿಯ ಹಾಗೂ ಕಿರಿಯ ಎರಡೂ ನ್ಯಾಯಲಯದಲ್ಲಿ ಲೋಕ ಅದಾಲತ್ ನಡೆಯಲಿದ್ದು ಪರಸ್ಪರ ರಾಜಿ ಮಾಡಿಕ್ಕೊಳ್ಳಲು ಬರುವ ಪ್ರಕರಣಗಳು (ವ್ಯಾಜ್ಯ ಪೂರ್ವ ಮತ್ತು ಬಾಕಿ ಇರುವ) ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ವಿರುತ್ತದೆ.
ವ್ಯಾಜ್ಯಪೂರ್ವ ಎನ್ ಐ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿನ ಪ್ರಕರಣಗಳು,ಹಣ ವಸೂಲಿ ಪ್ರಕರಣಗಳು,ಕಾರ್ಮಿಕ ವಿವಾದಗಳು,ವಿದ್ಯುತ್ ಮತ್ತು ನೀರಿನ ಬಿಲ್ಗಳು (ಸಂಯುಕ್ತವಲ್ಲದ ಹೊರತುಪಡಿಸಿ),ನಿರ್ವಹ ಣಾ ಪ್ರಕರಣಗಳು,ಇತರೆ (ಕ್ರಿಮಿನಲ್ ಸಂಯುಕ್ತ, ವೈವಾಹಿಕ ಮತ್ತು ಇತರ ನಾಗರಿಕ ವಿವಾದಗಳು), ಬ್ಯಾಂಕ್ ವಿಷಯಗಳು/ಹಣ ವಸೂಲಿ ಪ್ರಕರಣಗಳು, ವೈವಾಹಿಕ ವಿವಾದಗಳು (ವಿಚ್ಛೇದನ ಹೊರತುಪಡಿಸಿ),ಭೂಸ್ವಾಧೀನ ಪ್ರಕರಣಗಳು,ಪಿಂಚಣಿ ಪ್ರಕರಣಗಳು ಸೇರಿದಂತೆ ಸೇವಾ ವಿಷಯಗಳು;
ಉಚ್ಚ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯಗಳು ಮತ್ತು ರಾಜ್ಯ/ಜಿಲ್ಲೆ/ತಾಲೂಕು ಪ್ರಾಧಿಕಾರಗಳ ಮುಂದೆ ಬಾಕಿ ಇರುವ ಆದಾಯ ಮತ್ತು ಇತರ ಪೂರಕ ವಿಷಯಗಳು,ಇತರ ಸಿವಿಲ್ ಪ್ರಕರಣಗಳು (ಬಾಡಿಗೆ, ಸರಾಗಗೊಳಿಸುವ ಹಕ್ಕುಗಳು, ವಿಭಜನೆ ಮೊಕದ್ದಮೆಗಳು ಮುಂತಾದ ಪ್ರಕರಣಗಳನ್ನು ಪರಸ್ಪರ ರಾಜಿ ಮೂಲಕ ನಿಯಾಮಾನುಸಾರ ಇತ್ಯರ್ಥ ಪಡಿಸಿಕೊಳ್ಳಬಹು ದಾಗಿದೆ.
ಬೆಳಿಗ್ಗೆ 10 ಗಂಟೆಯಿಂದ ಈ ಅದಾಲತ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.










