ಪ್ಲಾಟಿಂಗ್, ನೈನಿಲವೆನ್,94.C ,ಮತ್ತು ಪಕ್ಷದ ಸಂಘಟನೆಯ ಬಗ್ಗೆ ಗಂಭೀರ ಚರ್ಚೆ
ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷದ ವಲಯ ಪ್ರಮುಖರ ಸಭೆ ಕಲ್ಲುಗುಂಡಿಯ ಕಲ್ಲುಂಪುರತ್ ಕಾಂಪ್ಲೆಕ್ಸ್ ನಲ್ಲಿ ಜುಲೈ 2ರಂದು ವಲಯ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಪ್ಲಾಟಿಂಗ್, ನೈನಿಲವೆನ್,94.C ,ಮತ್ತು ಪಕ್ಷದ ಸಂಘಟನೆಯ ಬಗ್ಗೆ ಗಂಭೀರ ಚರ್ಚೆನಡೆಯಿತು.
ಗ್ರಾಮದಲ್ಲಿ ಸ್ಥಗಿತವಾಗಿರುವ ಫ್ಲಾಟಿಂಗ್, ನೈನಿಲವೆನ್, ಕನ್ವರ್ಷನ್, 94.C ಬಗೆಗಿನ ಸಮಸ್ಯೆಗಳ ಪರಿಹಾರಕ್ಕಾಗಿ ವಲಯ ಕಾಂಗ್ರೆಸ್ ವತಿಯಿಂದ ,ಸಚಿವರು ಶಾಸಕರು, ತಾಶಿಲ್ದಾರರು ಮತ್ತು ಅಧಿಕಾರಿಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಿ ಪ್ರಯತ್ನ ನಡೆಸುವುದು ಎಂದು ತೀರ್ಮಾನಿಸಲಾಯಿತು.















ಪಕ್ಷದ ಕಾರ್ಯಕರ್ತೆ ಕೆರೋಲಿನಾ ಕ್ರಾಸ್ತ ರವರ ನಿವೇಶನಕ್ಕೆ ಸಂಭಂದಿಸಿದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲ್ಪಟ್ಟು ಅಧ್ಯಕ್ಷರಾದ ಶ್ರೀ ಸೋಮಶೇಖರ್ ಕೊಯಿಂಗಾಜೆಯವರ ನೇತೃತ್ವದಲ್ಲಿ ಸರಿಪಡಿಸಲು ಪ್ರಯತ್ನಿಸುವ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಸರಕಾರ ಬದಲಾಗಿ ಇಷ್ಟು ಸಮಯವಾದರೂ ಸುಳ್ಯ ತಾಲೂಕು ಅಕ್ರಮ ಸಕ್ರಮ ಸಮಿತಿಯ ಒಂದು ಸಭೆಯನ್ನು ಈವರೆಗೆ ನಡೆಸದಿರುವ ಬಗ್ಗೆ ಗಂಭೀರ ಚರ್ಚೆಯಾಗಿ ಇದು ಜನವಿರೋಧಿಯಾದ ವರ್ತನೆಯಾಗಿದ್ದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಭಟನೆ ತಿಳಿಸಲು ತೀರ್ಮಾನ ಮಾಡಲಾಯಿತು.
ಪಕ್ಷದ ಮತ್ತು ಸಿದ್ದರಾಮಯ್ಯ ಸರಕಾರದ ಸಾಧನೆಗಳ ಬಗ್ಗೆ ಕರಪತ್ರ ಮುದ್ರಿಸಿ ವಿತರಿಸುವುದು ಮತ್ತು ಗ್ರಾಮ ಪಂಚಾಯತ್ ನಲ್ಲಿ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಪಟ್ಟಿಮಾಡಿ ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸುವುದು.ಹಾಗೆ ಪಕ್ಷದ ಸಂಘಟನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಜಾನಿ.ಕೆ.ಪಿ ಅವರು ವಹಿಸಲಾಗಿ ,ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎ.ಕೆ.ಇಬ್ರಾಹಿಂ, ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ವಸಂತ ಪೆಲ್ತಡ್ಕ ,ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ , ಕೋಶಾಧಿಕಾರಿ ರಹೀಂ ಬೀಜದ ಕಟ್ಟೆ, ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಎ.ಕೆ.ಹನೀಫ್ ,ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರುಗಳಾದ ರಾಜು ಜ್ಞಾನಶೀಲನ್ ,ಪ್ರಮಿಳ ಪೆಲ್ತಡ್ಕ ,ಹಿರಿಯ ನಾಯಕರಾದ ಬೆಂಜಮಿನ್ ಡಿಸೋಜ,ತಾಜ್ ಮಹಮ್ಮದ್, ಉಮ್ಮರ್.ಪಿ.ಎ,ನ್ಯಾಯವಾದಿ ಡೊಮಿನಿಕ್ , ಸೆಬಾಸ್ಟಿಯನ್ ನೆಲ್ಲಿಕುಮೇರಿ,ಹಮೀದ್ ಹೆಚ್,ಶ್ರೀಧರ ಕೆ.ಕೆ.ನಾಗಮುತ್ತು ನೆಲ್ಲಿಕುಮೇರಿ,ಮತ್ತಿರರು ಹಾಜರಿದ್ದರು. ಲೂಕಾಸ್ ಟಿ.ಐ ಸ್ವಾಗತಿಸಿ ,ವಸಂತ ಪೆಲ್ತಡ್ಕ ವಂದಿಸಲಾಯಿತು.










