ಶಾಂತಿನಗರ :ಸ ಉ ಹಿ ಪ್ರಾ ಶಾಲಾ ಶಿಕ್ಷಕಿ ಶ್ರೀಮತಿ ಪಾರ್ವತಿಯವರಿಗೆ ಬೀಳ್ಕೊಡುಗೆ

0

ಎರಡು ವರ್ಷ ಉಚಿತವಾಗಿ ಮಜ್ಜಿಗೆ ಉಣಿಸಿದ ಪ್ರೀತಿಯ ಶಿಕ್ಷಕಿಯನ್ನು ಬೀಳ್ಕೊಟ್ಟ ವಿದ್ಯಾರ್ಥಿ ಸಮೂಹ

ಶಾಂತಿನಗರ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಪಾರ್ವತಿ ಯವರನ್ನು ಬೀಳ್ಕೊಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಮ್ಮದ್ ನಝೀರ್ ರವರು ವಹಿಸಿಕೊಂಡಿದ್ದರು. ಬೇರೆ ಬೇರೆ ಶಾಲೆಗಳಲ್ಲಿ ಸುಮಾರು 26 ವರ್ಷಗಳ ಕಾಲ ಉತ್ತಮ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಪಾರ್ವತಿ ಮೇಡಂ ಇವರು ಸೇವಾ ನಿವೃತ್ತಿಯನ್ನು ಹೊಂದಿರುತ್ತಾರೆ.ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಡಿನ ಮೂಲಕ ಭಾಷಣದ ಮೂಲಕ ಶಿಕ್ಷಕಿಯ ಉತ್ತಮ ಅಂಶಗಳನ್ನು ವ್ಯಕ್ತಪಡಿಸಿದರು.

ಉಪಸ್ಥಿತರಿದ್ದ ಶಿಕ್ಷಕರು,ಆಗಮಿಸಿದ ಅತಿಥಿಗಳು ಪಾರ್ವತಿ ಮೇಡಂ ಅವರ ಗುಣ ದಾನವನ್ನು ಮಾಡಿದರು. ಇವರ ಸೇವಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಶಾಲೆಗಳಲ್ಲಿ ಸುಮಾರು 26 ವರ್ಷಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಜ್ಜಿಗೆಯನ್ನು ನೀಡಿ ಸರ್ವರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದರು.

ಶಾಂತಿನಗರ ಶಾಲೆಯಲ್ಲೂ ಇವರು ನಿರಂತರವಾಗಿ ಎರಡು ವರ್ಷಗಳ ಕಾಲ ಮದ್ಯಾಹ್ನ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಮಜ್ಜಿಗೆ ಉಣಿಸಿ ವಿದ್ಯಾರ್ಥಿಗಳಿಗೂ, ಶಿಕ್ಷಕ ವೃಂದದಲ್ಲೂ, ಪೋಷಕರಲ್ಲೂ ಪ್ರೀತಿಯ ಶಿಕ್ಷಕಿಯಾಗಿ ಗುರುತಿಸಿಕ್ಕೊಂಡಿದ್ದರು.
ಅಲ್ಲದೆ ಶಾಂತಿನಗರ ಶಾಲೆಗೆ ಇನ್ವರ್ಟರ್ ಕೊಡುಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಟೀಲ್ ಗ್ಲಾಸ್ ಕೊಡುಗೆಯಾಗಿ ನೀಡಿದ್ದರು.

ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪವಿತ್ರಾ ರವರು ಸ್ವಾಗತಿಸಿ, ಶಿಕ್ಷಕರಾದ ರಘುನಾಥ ಯು ಕಾರ್ಯಕ್ರಮ ನಿರೂಪಿಸಿ ಚಂದ್ರಶೇಖರ ಪಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸುಳ್ಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಮಮತಾ ಕೆ, ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ದಾಮೋದರ ಮಂಚಿ,ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ಅಧ್ಯಕ್ಷರಾದ ರಿಫಾಯಿ ಪೈಚಾರ್ ಎಸ್‌.ಡಿ ಎಂ.ಸಿ ಯ ಸರ್ವ ಸದಸ್ಯರು, ಪೋಷಕರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು