ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು: ಸಂಗೀತ ರವಿರಾಜ್
ಸುಳ್ಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.2 ರಂದು ರೋಟರಿ ಸಭಾಂಗಣದಲ್ಲಿ ನಡೆಯಿತು.
2025-26 ನೇ ಸಾಲಿನ ನೂತನ ಅಧ್ಯಕ್ಷೆ ಡಾ.ಸವಿತಾ ಹೊದ್ದೆಟ್ಟಿ ಅಧಿಕಾರ ಸ್ವೀಕರಿಸಿ, ಕ್ಲಬ್ ಕಾರ್ಯ ಯೋಜನೆಯನ್ನು ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಾಹಿತಿ, ಲೇಖಕಿ ಶ್ರೀಮತಿ ಸಂಗೀತ ರವಿರಾಜ್ ಆಗಮಿಸಿ ಮಾತನಾಡಿ
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಆತ್ಮವಿಶ್ವಾಸವನ್ನು ತೋರಬೇಕು. ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಪುಸ್ತಕ, ಲೇಖನ ಬರೆಯುವುದು ಇಂತಹ ಮನಸ್ಸಿಗೆ ಮುದ ನೀಡುವ ಕಾರ್ಯದಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಬಳಿಕ ಇನ್ನರವಿಲ್ ಕ್ಲಬ್ ವತಿಯಿಂದ ಅನಾರೋಗ್ಯ ದಿಂದ ಬಳಲುತ್ತಿರುವ ಆನಂದ ಗೌಡ ಕೊಡಂಕೇರಿ, ಎಡಮಂಗಲ ಇವರಿಗೆ 5000, ಅಡ್ಕಾರು ವನವಾಸಿ ಮಕ್ಕಳ ವಿದ್ಯಾರ್ಥಿ ನಿಲಯ ಇಲ್ಲಿಗೆ 4000 ಹಾಗೂ ಪುಸ್ತಕ, ವಿದ್ಯಾರ್ಥಿನಿ ಯಶಿಕ ಇವರಿಗೆ ಬ್ಯಾಗ್ ಹಾಗೂ ಪುಸ್ತಕ ನೀಡಲಾಯಿತು.
ಈ ಬಾರಿಯ ಇನ್ನರ್ ಸ್ಫೂರ್ತಿ ಯನ್ನು ನೂತನ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಮಮೋಹನ್ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.
















ಕ್ಲಬ್ ನ ಕಾರ್ಯದರ್ಶಿ ಡಾ.ಪ್ರಜ್ಞಾ ಎಂ.ಆರ್., ಕೋಶಾಧಿಕಾರಿ ಡಾ. ಸ್ಮಿತಾ ಹರ್ಷವರ್ಧನ್, .
ನಿಕಟ ಪೂರ್ವಾಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ, ಉಪಾಧ್ಯಕ್ಷೆ
ಡಾ. ಹರ್ಷಿತಾ ಪುರುಷೋತ್ತಮ್, ಎಡಿಟರ್ ಶ್ರೀಮತಿ ಸೌಮ್ಯ ರವಿಪ್ರಸಾದ್ , ಐಎಸ್ಓ
ಶ್ರೀಮತಿ ಉಷಾ ಸಿ ಶೆಟ್ಟಿ , ಜೊತೆ ಕಾರ್ಯದರ್ಶಿ ಶ್ರೀಮತಿ ಸುಜಾತ ಕಾಮತ್ ವೇದಿಕೆ ಯಲ್ಲಿದ್ದರು. ಪೂರ್ವಧ್ಯಕ್ಷರುಗಳಾದ ಶ್ರೀಮತಿ ಸವಿತಾ ನಾರ್ಕೋಡು, ಶ್ರೀಮತಿ ಪೂಜಾ ಸಂತೋಷ್ ವೇದಿಕೆಯಲ್ಲಿದ್ದು, ಕಾರ್ಯಕ್ರಮಕ್ಕೆ, ಶುಭ ಹಾರೈಸಿದರು.

EC ಮೆಂಬರ್ ಶ್ರೀಮತಿ ಶಶಿಕಲಾ ಹರಪ್ರಸಾದ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಶ್ರೀಮತಿ ಚಿಂತನಾ ಸುಬ್ರಮಣ್ಯ ರವರು ಸ್ವಾಗತಿಸಿ, ಶ್ರೀಮತಿ ಸುಜಾತ ಕಾಮತ್ ರವರು ಪ್ರಾರ್ಥಿಸಿದರು, ಶೀಮತಿ ಸುಧಾ ಶ್ರೀಧರ್ ಇನ್ನರ್ ವೀಲ್ ಪ್ರಾರ್ಥನೆ, ಡಾ. ಹರ್ಷಿತ ಪುರುಷೋತ್ತಮ ಧನ್ಯವಾದ ಗೈದರು.
ಶ್ರೀಮತಿ ಶ್ರೀದೇವಿ ನಾಗರಾಜ್ ಹಾಗು ಮಮತಾ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು.










