ಉಬರಡ್ಕ ಮಿತ್ತೂರು ಗ್ರಾಮದ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿಯ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆಯು ಜೂ.29 ರಂದು ಸಾರ್ವಜನಿಕ ಶ್ರೀ ದೇವತರಾಧನಾ ಸಮಿತಿಯ ಅಧ್ಯಕ್ಷ ಶಶಿಧರ್ ನಾಯರ್ ರವರ ಅಧ್ಯಕ್ಷತೆಯಲ್ಲಿ ಉಬರಡ್ಕ ಶ್ರೀ ನರಸಿಂಹ ಶಾಸ್ತವು ದೇವಾಲಯದ ಸಭಾಂಗಣದಲ್ಲಿ ನಡೆಯಿತು.















ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿವಾಕರ ಶೆಟ್ಟಿಹಿತ್ಲು, ಅರ್ಚಕ ಮಧ್ವರಾಜ ಭಟ್, ದೇವತರಾಧನ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ಕಕ್ಕೆಬೆಟ್ಟು ಉಪಸ್ಥಿತರಿದ್ದರು.
ನಂತರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ನೂತನ ಅಧ್ಯಕ್ಷರಾಗಿ ಗೌ. ಕ್ಯಾಪ್ಟನ್ ಜಯಕರ ಮಡ್ತಿಲ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸಂದೀಪ್ ಮದುವೆಗದ್ದೆ, ಖಜಾಂಜಿ ರಾಘವ ಬಿ. ರಾವ್, ಸಂಚಾಲಕರಾಗಿ ನ್ಯಾಯವಾದಿ ಶ್ಯಾಮ್ ಪಾನತ್ತಿಲ, ಜತೆ ಕಾರ್ಯದರ್ಶಿ ಉದಯಕುಮಾರ್ ಮಾಣಿಬೆಟ್ಟು, ಉಪಾಧ್ಯಕ್ಷರುಗಳಾಗಿ ರಮೇಶ ಪಾನತ್ತಿಲ, ಶೀನಪ್ಪ ಸೂರ್ಯಮನೆ, ದಿವಾಕರ ಶೆಟ್ಟಿಹಿತ್ಲು, ಮಾನ ಪಾಟಾಳಿ, ಸುಬ್ಬಪ್ಪ ಅಂಬಟೆಡ್ಕ, ಹರಿಪ್ರಸಾದ್ ಪಾನತ್ತಿಲ ಹಾಗೂ ಸದಸ್ಯರುಗಳಾಗಿ ಸುಮಾರು 30 ಜನರನ್ನು ಆಯ್ಕೆ ಮಾಡಲಾಯಿತು.










