














ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷರಾಗಿ ಆಯ್ಕೆಯಾದ ಸುಳ್ಯ ವರ್ತಕರ ಸಂಘದ ಕೋಶಾಧಿಕಾರಿ ಹೇಮಂತ್ ಕಾಮತ್ ಹಾಗೂ ವರ್ತಕರ ಸಂಘದ ಸದಸ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ರವರನ್ನು ವರ್ತಕರ ಸಂಘದ ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ವರ್ತಕರ ಸಂಘದ ಪಿ ಬಿ ಸುಧಾಕರ ರೈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸುಳ್ಯ ನಗರದ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಕೆಲಸಕ್ಕೆ ನಾವು ಮುಂದಾಗಬೇಕು ಅಲ್ಲದೆ ಬೇರೆ ಬೇರೆ ವಿಚಾರಗಳ ಚರ್ಚೆ ನಡೆಯಿತು.
ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ ಎಸ್ ಗಿರೀಶ್ ಸ್ವಾಗತಿಸಿದರು.
ಉಪಾಧ್ಯಕ್ಷರಾದ ಪಿ ರಾಮಚಂದ್ರ, ಸಿಎ ಗಣೇಶ್ ಭಟ್ ಪಿ,ಆದಂ ಹಾಜಿ ಕಮ್ಮಾಡಿ,ಪ್ರಭಾಕರ್ ನಾಯರ್ ಸ್ವಾಗತ್,ಅಬ್ದುಲ್ ಹಮೀದ್ ಜನತಾ,ನಿರ್ದೇಶಕರಾದ ಸುಂದರ್ ರಾವ್,ಧರ್ಮಪಾಲ ಕೆ ಎಸ್,ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್,ಜಗನ್ನಾಥ ರೈ,ಅದಿತ್ಯ ಕೃಷ್ಣ, ಸ್ಯಾಮ್ ಸಿಂಗ್, ಇಬ್ರಾಹಿಂ ಕದಿಕಡ್ಕ ,ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಎಸ್ ವೈ ಮತ್ತು ಲತಾ ಪ್ರಸಾದ್ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು.










